Headlines

ಬಾಗಲಕೋಟೆ: ತಾಲಿಬಾನ್ ಪರವಾಗಿ ಪೋಸ್ಟ್ ಹಾಕಿದ್ದ ಯುವಕ ಅರೆಸ್ಟ್

Spread the love

ಬಾಗಲಕೋಟೆ : ಐ ಲವ್ ತಾಲಿಬಾನ್ ಎಂದು ಪೋಸ್ಟ್ ಹಾಕಿದ್ದ ಯುವಕನನ್ನು ಜಮಖಂಡಿ ಪೊಲೀಸರು ಬಂಧಿಸಿದ್ದಾರೆ.

ಬಾಗಲಕೋಟೆ ಜಿಲ್ಲೆ ಜಮಖಂಡಿಯ ಆಸೀಫ್ ಗಲಗಲಿ ಬಂಧಿತ ಯುವಕ ಎಂದು ಹೇಳಲಾಗಿದೆ. ಆಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು ವಶಕ್ಕೆ ಪಡೆದು ಹಿಂಸಾಚಾರ ನಡೆಸುತ್ತಿದ್ದಾರೆ. ಅಂತಹ ತಾಲಿಬಾನ್ ಪರವಾಗಿ ಫೇಸ್ಬುಕ್ ನ ಪೋಸ್ಟ್ ಮಾಡಿದ್ದಾನೆ. ಆಸೀಫ್, ಐ ಲವ್ ತಾಲಿಬಾನ್ ಎಂದು ಮಾಡಿದ್ದ ಪೋಸ್ಟ್ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆತನ ವಿರುದ್ಧ ಸ್ಥಳೀಯರು ಕ್ರಮಕ್ಕೆ ಆಗ್ರಹಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆನ್ನಲಾಗಿದೆ.