ಮತ್ತೊಂದು ಸೂಪರ್ ಹಿಟ್ ಹಾಡು ಹಾಡಿದ ರಾನು ಮೊಂಡಲ್..!

Spread the love

ಮುಂಬೈ: ಅದೃಷ್ಟವೊಂದಿದ್ರೆ ಸಾಕು ರಾತ್ರಿ ಕಳೆದು ಹಗಲಾಗುವುದರೊಳಗೆ ಏನು ಇಲ್ಲದವರಿಗೂ ಸ್ಟಾರ್ ಗಿರಿ ಬಂದು ಬಿಡಬಹುದು. ಹಾಗೇ ಅದೃಷ್ಟ ಖರಾಬ್ ಆದ್ರೆ ಎಲ್ಲಾ ಇದ್ದವರು ನೆಲ ಕಚ್ಚಿಬಿಡಬಹುದು. ರಾನು ಮೊಂಡಲ್ ವಿಚಾರದಲ್ಲೂ ಆಗಿದ್ದು ಅದೇ. ನಿಮ್ಗೆಲ್ಲಾ ರಾನು ಮೊಂಡಲ್ ಬಗ್ಗೆ ಹೊಸದಾಗಿ ಏನು ಪರಿಚಯ ಮಾಡಿಕೊಡೋದು ಬೇಡ ಅನ್ಸುತ್ತೆ.

ಯಾಕಂದ್ರೆ ಹಾಡಿದ ಒಂದೇ ಒಂದು ಹಾಡು, ಯಾರದ್ದೋ ಮೊಬೈಲ್, ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಫುಲ್ ವೈರಲ್. ಅದಾದ ಬಳಿಕ ಏನೆಲ್ಲಾ ಆಯ್ತು ಅನ್ನೋದು ನಿಮ್ಗೆ ಗೊತ್ತು. ರಾನು ಮೊಂಡಲ್ ಫುಲ್ ಫೇಮಸ್ ಗಾಯಕಿಯಾದ್ರು. ಲಕ್ಷ ಲಕ್ಷ ಹಣ ಸಂಪಾದಿಸಿದ್ರು. ಆ ಬಳಿಕ ಅದೃಷ್ಟ ಕೈಕೊಡ್ತೋ ಏನೋ ಅವಕಾಶಗಳಿಲ್ಲದೆ ಖಾಲಿ ಕೈನಲ್ಲಿ ಕುಳಿತ್ರು. ಇದೀಗ ಮತ್ತೆ ರಾನು ಮೊಂಡಲ್ ಮೈಕ್ ಹಿಡಿದು ಹಾಡೋಕೆ ಶುರು ಮಾಡಿದ್ದಾರೆ.

ರಾನು ಅವರು ಇದೀಗ ಮತ್ತೆ ಹೊಸ ಹಾಡಿನೊಂದಿಗೆ ವೈರಲ್ ಆಗಿದ್ದಾರೆ. ಮನಿಕೆ ಮಗೆ ಹಿತೆ. ಹಾಡು ಹಾಡುತ್ತಿರುವ ವಿಡಿಯೋವನ್ನು ರೊಂಧೋನ್ ಪೊರಿಚೋಯ್ ಎಂಬ ಯೂಟ್ಯೂಬರ್ ಹಂಚಿಕೊಂಡಿದ್ದಾರೆ. ಸದ್ಯ ಈ ವೀಡಿಯೋವನ್ನು ಸುಮಾರು 54,000 ಜನರಿಗೂ ಹೆಚ್ಚು ಮಂದಿ ನೋಡಿದ್ದಾರೆ.