ಧರ್ಮಾ ಜಲಾಶಯದಲ್ಲಿ ಓರ್ವನ ರಕ್ಷಣೆ..!ಮತ್ತೊಬ್ಬ ನಾಪತ್ತೆ..!!

ಮುಂಡಗೋಡ : ತಾಲೂಕಿನ ಮಳಗಿ ಬಳಿಯ ಧರ್ಮಾ ಜಲಾಶಯವನ್ನು ನೋಡಲು ಹೋಗಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ನಾಪತ್ತೆಯಾದರೆ ಮತ್ತೊಬ್ಬನನ್ನು ರಕ್ಷಿಸಿದ ಘಟನೆ ನಡೆದಿದೆ.  ಮುಡಸಾಲಿಯ ಶ್ರೀನಾಥ ಎಂಬಾತನೇ ಧರ್ಮಾ ಜಲಾಶಯದಲ್ಲಿ ಕೊಚ್ಚಿಕೊಂಡು ಹೋದರೆ ಮತ್ತೊಬ್ಬ ಪೀರಪ್ಪನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.

Read More

ರಾಜಕೀಯವಾಗಿ ನಮ್ಮನ್ನು ಕುಗ್ಗಿಸುವ ಷಡ್ಯಂತ್ರ : ಜೈಲಿನಿಂದ ಬಿಡುಗಡೆಯಾದ ಬಳಿಕ ಸೂರಜ್ ರೇವಣ್ಣ ಫಸ್ಟ್ ರಿಯಾಕ್ಷನ್

ಬೆಂಗಳೂರು : ನಮ್ಮ ಕುಟುಂಬದ ವಿರುದ್ಧ ಷಡ್ಯಂತರ ಮಾಡಿ ತೇಜೋವಧೆ ಮಾಡಿದ್ದಾರೆ. ತೇಜೋವಧೆ ಮಾಡುವ ದುರುದ್ದೇಶದಿಂದ ಕೇಸ್ ದಾಖಲಿಸಿದ್ದಾರೆ ಎಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದ ಜೆಡಿಎಸ್ ಎಂಎಲ್ಸಿ ಸೂರಜ್ ರೇವಣ್ಣ ಮೊದಲ ಪ್ರತಿಕ್ರಿಯೆ ನೀಡಿದರು.ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಹಲವು ದಿನಗಳಿಂದ ಎಂಎಲ್ಸಿ ಸೂರಜ್ ರೇವಣ್ಣ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದರು. ನಿನ್ನೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಷರತ್ತು ಬದ್ಧ ಜಾಮೀನು ನೀಡಿ ಆದೇಶ ನೀಡಿತ್ತು. ಹಾಗಾಗಿ ಇಂದು…

Read More

ಇಂದಿನ ‘ಕೇಂದ್ರ ಬಜೆಟ್ 2024-25’ರ ಪ್ರಮುಖ ಹೈಲೈಟ್ಸ್ ಇಲ್ಲಿದೆ…..

ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಗಳವಾರ ಸಂಸತ್ತಿನಲ್ಲಿ ಮಂಡಿಸಿದರು. ಅದರ ಪ್ರಮುಖ ಮುಖ್ಯಾಂಶಗಳನ್ನು ಮುಂದೆ ಓದಿ…  ಇದು ಪ್ರಧಾನಿ ನರೇಂದ್ರ ಮೋದಿಯವರ ಮೂರನೇ ಅವಧಿಯ ಮೊದಲ ಬಜೆಟ್ ಆಗಿದ್ದು, 2047 ರ ವೇಳೆಗೆ ‘ವಿಕ್ಷಿತ್ ಭಾರತ್’ ಗಾಗಿ ಅವರ ಮಾರ್ಗಸೂಚಿಯನ್ನು ಕೇಂದ್ರೀಕರಿಸಿದೆ.ಭಾರತದ ಜನರು ಮೋದಿ ನೇತೃತ್ವದ ಸರ್ಕಾರದ ಮೇಲಿನ ನಂಬಿಕೆಯನ್ನು ಬಲಪಡಿಸಿದ್ದಾರೆ ಮತ್ತು ಮೂರನೇ ಅವಧಿಗೆ ಅದನ್ನು ಮರು ಆಯ್ಕೆ ಮಾಡಿದ್ದಾರೆ ಎಂದು ಲೋಕಸಭೆಯಲ್ಲಿ…

Read More

ಬಸವಣ್ಣ ಹೊಂಡದಲ್ಲಿ ಬಿದ್ದು ಆತ್ಮಹತ್ಯೆ ಯತ್ನಿಸಿದ ಮಹಿಳೆ, ಆಸ್ಪತ್ರೆಯಲ್ಲಿ ಸಾವು

ಮುಂಡಗೋಡ : ಪಟ್ಟಣದ ಬಸವಣ್ಣನ ಹೊಂಡದಲ್ಲಿ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯೊಬ್ಬಳು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆಯೊಂದು ಇಂದು ಸಂಭವಿಸಿದೆ.  ಡಾ.ಅಂಬೇಡ್ಕರ್ ಓಣಿಯ ರುಕ್ಮಿಣಿ ವಡ್ಡರ ಎಂಬಾಕೆಯೇ ಮೃತಪಟ್ಟ ಮಹಿಳೆಯಾಗಿದ್ದಾಳೆ.ಬಸವಣ್ಣ ಹೊಂಡಕ್ಕೆ ಮಹಿಳೆ ಬಿದ್ದಾಗಲೇ ಕೆಲವರು ಪೊಲೀಸರಿಗೆ ಮಾಹಿತಿ ಮುಟ್ಟಿಸಿದರು. ತಕ್ಷಣವೇ ಪಿಎಸ್ಐ ಪರಶುರಾಮ ಹಾಗೂ ಪೊಲೀಸರು ಬಂದು ಮಹಿಳೆಯನ್ನು ಬಸವಣ್ಣ ಹೊಂಡದಿಂದ ಮೇಲೆಕ್ಕೆತ್ತಿ ಆಸ್ಪತ್ರೆಗೆ ಕಳಿಸಿದರಾದರೂ ಮಹಿಳೆಯ ಪ್ರಾಣ ಉಳಿಯಲಿಲ್ಲ ಎನ್ನಲಾಗಿದೆ.

Read More

ಬಜೆಟ್ 2024 : ಬಡವರು, ಮಹಿಳೆಯರು, ರೈತರು ಸೇರಿ 9 ಆದ್ಯತೆ ಕ್ಷೇತ್ರ ಘೋಷಣೆ…..

ನವದೆಹಲಿ : ಭಾರೀ ನಿರೀಕ್ಷೆಯ ಮೋದಿ ಸರ್ಕಾರ 3.0 ಅವಧಿಯ ಮೊದಲ ಬಜೆಟ್ ಮಂಡನೆಯಾಗುತ್ತಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ 7ನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ ದಾಖಲೆ ಬರೆದಿದ್ದಾರೆ.ಬಜೆಟ್ ಭಾಷಣದ ಆರಂಭದಲ್ಲೇ 2024-25ರ ಆಯವ್ಯಯ ದಾಖಲೆ ಪತ್ರದಲ್ಲಿ ಆದ್ಯತೆ ನೀಡಿದ ಕ್ಷೇತ್ರಗಳನ್ನು ಘೋಷಿಸಲಾಗಿದೆ.  ಈ ಪೈಕಿ ಯುವ, ಅನ್ನದಾತ, ಬಡವ ಹಾಗೂ ಮಹಿಳೆ ಸೇರಿದಂತೆ ಈ 9 ಕ್ಷೇತ್ರಗಳಿಗೆ ಪ್ರಮುಖವಾಗಿ ಆದ್ಯತೆ ನೀಡಲಾಗಿದೆ. ಇದೇ ವೇಳೆ ಕೌಶಲ್ಯ, ಮಧ್ಯಮವರ್ಗ, ನಿರುದ್ಯೋಗ, ಎಮ್ ಎಸ್…

Read More

ಭದ್ರಾಪುರದಲ್ಲಿ ಮಳೆ, ಗಾಳಿಯಿಂದ ಮನೆ ಮೇಲೆ ಬಿದ್ದ ಮರ : ಇಬ್ಬರಿಗೆ ಗಾಯ

ಮುಂಡಗೋಡ : ಧಾರಾಕಾರ ಮಳೆ, ಗಾಳಿಯಿಂದಾಗಿ ತಾಲೂಕಿನ ಭದ್ರಾಪುರ ಗ್ರಾಮದಲ್ಲಿ ನಿನ್ನೆ ರಾತ್ರಿ ಮನೆಯ ಮೇಲೆ ಮರ ಬಿದ್ದು ಇಬ್ಬರಿಗೆ ಸಣ್ಣಪುಟ್ಟ ಗಾಯವಾದರೆ ಮನೆಗೆ ತೀವ್ರ ಹಾನಿಯಾದ ಘಟನೆ ನಡೆದಿದೆ.  ಧಾರಾಕಾರ ಮಳೆ ಮತ್ತು ಗಾಳಿಯಿಂದ ಭದ್ರಾಪುರದ ಹೊಸನಗರದಲ್ಲಿ ರಜಿಯಾ ಬೇಗಂ ಕಾಸಿಂಸಾಬ್ ಶೇಖ ಎಂಬುವರ ಮನೆ ಮೇಲೆ, ಮನೆ ಪಕ್ಕದಲ್ಲಿದ್ದ ಬೃಹತ್ ಗಾತ್ರದ ಮರ ಬಿದ್ದಿದೆ. ಮನೆ ಮೇಲೆ ಬಿದ್ದು ಹಾನಿಯಾಗಿದೆ. ಮನೆಯಲ್ಲಿದ್ದ ರಜಿಯಾ ಬೇಗಂ ಮತ್ತು ಮಗನಿಗೆ ಸಣ್ಣಪುಟ್ಟ ಗಾಯವಾಗಿದೆ.ಘಟನೆ ನಡೆದ ಬಳಿಕ ತಡರಾತ್ರಿ…

Read More

ಶಿರೂರ ಗುಡ್ಡ ಕುಸಿದು ದುರಂತ : ಮಹಿಳೆ ಶವ ಪತ್ತೆ

ಅಂಕೋಲಾ : ಕಳೆದ ಎಂಟುದಿನಗಳ ಹಿಂದೆ ಶಿರೂರು ಬಳಿ ಗುಡ್ಡಕುಸಿತವಾಗಿ ಹನ್ನೊಂದು ಜನ ಮೃತಪಟ್ಟಿದ್ದು ಇಂದು ಬೆಳಿಗ್ಗೆ ಓರ್ವ ಮಹಿಳೆಯ ಶವ ಗಂಗಾವಳಿ ನದಿಯ ಗಂಗೆಕೊಳ್ಳ ನದಿ ತೀರದಲ್ಲಿ ಪತ್ತೆಯಾಗಿದೆ.  ಶಿರೂರು ಗುಡ್ಡಕುಸಿತದಿಂದ ಗಂಗಾವಳಿ ನದಿಯ ಇನ್ನೊಂದು ಪಕ್ಕದಲ್ಲಿದ್ದ ಉಳುವರೆ ಗ್ರಾಮದ ಸುಮಾರು ಐದಕ್ಕೂ ಹೆಚ್ಚು ಮನೆಗಳು ನೆಲಸಮವಾಗಿ ಸಣ್ಣೀ ಗೌಡ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಇನ್ನೂ ಹತ್ತಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು.ನಾಪತ್ತೆಯಾಗಿದ್ದ ಸಣ್ಣೀ ಗೌಡ ಪತ್ತೆಗಾಗಿ ಕಳೆದ ಎಂಟು ದಿನಗಳಿಂದ ನಿರಂತರವಾಗಿ ಕಾರ್ಯಚರಣೆ…

Read More

ಧರ್ಮಾ ಜಲಾಶಯದ ಈ ಸೇತುವೆ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿ…..

ಮುಂಡಗೋಡ : ತಾಲೂಕಿನ ಧರ್ಮಾ ಜಲಾಶಯ ಭಾರೀ ಮಳೆಗೆ ಭರ್ತಿಯಾಗುತ್ತಿದ್ದು ನೀರು ಬಿಡುಗಡೆ ಮಾಡಲು ಮಾಡಿದ ಸೇತುವೆ ಕುಸಿಯುವ ಹಂತಕ್ಕೆ ಬಂದು ತಲುಪಿದೆ.ಇದರಿಂದ ಅಪಾಯವಾಗುವ ಸಾಧ್ಯತೆಯಿದೆ.  ಈ ಜಲಾಶಯಕ್ಕೆ ನೂರಾರು ಪ್ರವಾಸಿಗರು ಬರುತಿದ್ದು, ಇದೇ ಸೇತುವೆ ಮೇಲೆ ಹೋಗಿ ಗೇಟಿನ ಮೇಲೆ ನಿಂತು ಫೋಟೋ ಕ್ಲಿಕ್ಕಿಸುತ್ತಾರೆ. ಈಗೋ ಆಗೋ ಬೀಳುವ ಸ್ಥಿತಿಯಲ್ಲಿರುವ ಈ ಸೇತುವೆ ಬಗ್ಗೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Read More

ಮುಂಡಗೋಡ : ಕೆರೆ, ಜಲಾಶಯದ ನೀರಿನ ಸಂಗ್ರಹಣೆ ಎಷ್ಟಿದೆ..?

ಮುಂಡಗೋಡ : ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮುಂಡಗೋಡ ತಾಲೂಕಿನ ಕೆಲವು ಕೆರೆ ಹಾಗೂ ಜಲಾಶಯಗಳಿಗೆ ನೀರು ಹರಿದು ಬರುತ್ತಿದೆ.  ತಾಲೂಕಿನ 11 ಕೆರೆಗಳು ಭರ್ತಿಯಾಗಿದೆ. ಇನ್ನುಳಿದ 11 ಕೆರೆಗಳಲ್ಲಿ ಶೇ.80ರಷ್ಟು ನೀರು ಸಂಗ್ರಹವಾಗಿದೆ.  ಮುಂಡಗೋಡ ಪಟ್ಟಣದ ಹೊರವಲಯದ ಅಮ್ಮಾಜಿ ಕೆರೆ ಭರ್ತಿಯಾಗಿ ಹೆಚ್ಚುವರಿ ನೀರು ಹರಿದು ಹೋಗುತ್ತಿದೆ.  ಇನ್ನು ಜಲಾಶಯಕ್ಕೂ ನೀರು ಹರಿದು ಬರುತ್ತಿದೆ. ಸನವಳ್ಳಿ ಜಲಾಶಯಕ್ಕೆ ಶೇ.45ರಷ್ಟು ನೀರು ಸಂಗ್ರಹವಾಗಿದೆ. ನ್ಯಾಸರ್ಗಿ ಜಲಾಶಯದಲ್ಲಿ ಶೇ.35, ಅತ್ತಿವೇರಿ ಜಲಾಶಯದಲ್ಲಿ ಶೇ.35, ಚಿಗಳ್ಳಿ ಜಲಾಶಯದಲ್ಲಿ ಶೇ.30,…

Read More

ಬಡ ಅತಿಕ್ರಮಣದಾರರ ಮೇಲೆ ಮರುಕಳಿಸಿದ ಅರಣ್ಯ ಸಿಬ್ಬಂದಿಗಳ ದೌರ್ಜನ್ಯ : ಸಿಬ್ಬಂದಿಗಳ ಮೇಲೆ ಕ್ರಮಕ್ಕೆ ರವೀಂದ್ರ ನಾಯ್ಕ ಆಗ್ರಹ

ಮುಂಡಗೋಡ : ಅನಾದಿಕಾಲದಿಂದ ಅರಣ್ಯಭೂಮಿಯನ್ನು ಸಾಗುವಳಿ ಮಾಡುತ್ತಿರುವ ಕಾತೂರ ವಲಯ ವ್ಯಾಪ್ತಿಯ ನಾಗನೂರ ಗ್ರಾಮದ ಅರಣ್ಯವಾಸಿಯ ಸಾಗುವಳಿಗೆ ಆತಂಕಪಡಿಸಿ, ದೌರ್ಜನ್ಯ ನಡೆಸಿದ ಸಿಬ್ಬಂದಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂಡಗೋಡ ತಾಲೂಕಿನ ಕಾತೂರ ಗ್ರಾಪಂ ವ್ಯಾಪ್ತಿಯ ನಾಗನೂರ ಎಂಬಲ್ಲಿ ಅತಿಕ್ರಮಣದಾರ ಗರೀಬ ದಿವಾನ ಶಾಬುಸಾಬ ಹಿರೇಹಳ್ಳಿ ಎಂಬುವವರ ಅರಣ್ಯ ಅತಿಕ್ರಮಣ ಸಾಗುವಳಿ ಕ್ಷೇತ್ರಕ್ಕೆ ಅಧ್ಯಕ್ಷ ರವೀಂದ್ರ ನಾಯ್ಕ ಭೇಟಿ ಕೊಟ್ಟ ಸಂದರ್ಭದಲ್ಲಿ ಮೇಲಿನಂತೆ…

Read More