Headlines

ರಕ್ತಹೀನತೆ ಸಮಸ್ಯೆಗೆ ಇಲ್ಲಿದೆ ಉಪಾಯ

ದೇಹದಲ್ಲಿ ರಕ್ತ ಕಡಿಮೆ ಪ್ರಮಾಣದಲ್ಲಿ ಇದೆ ಎಂದರೆ ರಕ್ತಹೀನತೆಯಿಂದ ನಾವು ಬಳಲುತ್ತಿದ್ದೇವೆ ಎಂದು ಅರ್ಥ. ಇದು ಕ್ರಮೇಣವಾಗಿ ಅನೇಕ ರೋಗಗಳಿಗೆ ಕಾರಣವಾಗಬಹುದು. ವಿಶೇಷವಾಗಿ ಜೀವಕ್ಕೆ ಹೆಚ್ಚು ಅಪಾಯಕಾರಿ. ದೇಹದಲ್ಲಿ ಕಡಿಮೆ ರಕ್ತದೊತ್ತಡವನ್ನು ರಕ್ತಹೀನತೆ (Anemia) ಎಂದು ಕರೆಯಲಾಗುತ್ತದೆ. ಇದು ತಲೆತಿರುಗುವಿಕೆ, ನಿಶಕ್ತಿ, ತಲೆನೋವಿನಂತಹ ರೋಗಲಕ್ಷಣಗಳನ್ನು ಉಂಟುಮಾಡಬಹುದು. ದೇಹದಲ್ಲಿ ಕಬ್ಬಿಣಾಂಶದ ಕೊರತೆ (Iron deficiency) ಯಿಂದಾಗಿಯೂ ರಕ್ತದ ಕೊರತೆ ಉಂಟಾಗುತ್ತದೆ. ಇದಕ್ಕಾಗಿ ನೀವು ಪ್ರತಿ ಬಾರಿಯೂ ವೈದ್ಯರ ಬಳಿ ಹೋಗಬೇಕಾಗಿಲ್ಲ. ಬದಲಾಗಿ ಕೆಲವು ಆಹಾರಗಳನ್ನು ಸೇವಿಸುವುದರಿಂದ ರಕ್ತಹೀನತೆಯ ಸಮಸ್ಯೆಯನ್ನು…

Read More

Friendship Day Wishes: ಸ್ನೇಹಿತರ ದಿನದ ಶುಭಾಶಯಗಳು

ಪ್ರತಿ ಹೆಜ್ಜೆಯಲ್ಲಿ ಕೈ ಹಿಡಿದು ಮುನ್ನುಗ್ಗುತ್ತ ಸಾಧನೆ ದಾರಿ ಹಿಡಿಯಲು ಪ್ರತಿ ಹಂತದಲ್ಲಿಯೂ ಸಹಾಯ ಮಾಡಿದ ಸ್ನೇಹಿತರ ದಿನವಿಂದು. ಪ್ರತೀ ವರ್ಷ ಆಗಸ್ಟ್ ತಿಂಗಳ ಮೊದಲನೇ ಭಾನುವಾರ ಸ್ನೇಹಿತರ ದಿನವನ್ನು(Friendship Day) ಆಚರಿಸಲಾಗುತ್ತದೆ. ಈ ಬಾರಿ ಆಗಸ್ಟ್ ತಿಂಗಳ 1ನೇ ತಾರೀಕಿನಂದು ಮೊದಲ ಭಾನುವಾರ ಬಂದಿರುವುದರಿಂದ ಇಂದು ಸ್ನೇಹಿತರ ದಿನವನ್ನು ಆಚರಿಸಲಾಗುತ್ತಿದೆ. ಪ್ರೀತಿ, ವಿಶ್ವಾಸದ ಬಾಳ್ವೆ ಸ್ನೇಹ. ಸ್ನೇಹವೆಂಬ ಸುಂದರ ಬಾಂಧವ್ಯಕ್ಕೆ ಎಂದೂ ಬೆಲೆ ಕಟ್ಟಲಾಗದು. ಚಿಕ್ಕ ವಯಸ್ಸಿನಿಂದಲೂ ಜೊತೆಗಿದ್ದ ನಮ್ಮೆಲ್ಲಾ ನೋವು, ಸಂತೋಷವನ್ನು ಹಂಚಿಕೊಂಡು ಸಂತೈಸುವ ಸ್ನೇಹಿತರಿಗೆ ಇಂದು…

Read More

ಕೋವಿಡ್ : 24 ಗಂಟೆಗಳಲ್ಲಿ 41, 831 ಪ್ರಕರಣಗಳು ಪತ್ತೆ

ನವದೆಹಲಿ : ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 40 ಸಾವಿರಕ್ಕಿಂತ ಅಧಿಕ ಕೋವಿಡ್ 19 ಹೊಸ ಪ್ರಕರಣಗಳು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಆದಿತ್ಯವಾರ (ಆಗಷ್ಟ್ 01) ಬಿಡುಗಡೆ ಮಾಡಿರುವ ಅಂಕಿ ಅಂಶದಲ್ಲಿ ಮಾಹಿತಿ ನೀಡಿದೆ. ದೇಶದಲ್ಲಿ ಕಳೆದ 24ಗಂಟೆಗಳಲ್ಲಿ 41, 831 ಹೊಸ ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ. ಜುಲೈ 27ರಂದು ಭಾರತದಲ್ಲಿ 30,000ಕ್ಕಿಂತ ಕಡಿಮೆ ಕೋವಿಡ್ ಪ್ರಕರಣಗಳು ವರದಿಯಾಗಿತ್ತು. ಇದು ಕಳೆದ 132 ದಿನಗಳ ಬಳಿಕದ ಕಡಿಮೆ ಪ್ರಮಾಣದ ಪ್ರಕರಣವಾಗಿತ್ತು. ಆದರೆ ಜುಲೈ 28ರಂದು 43,654…

Read More

ಕಳಚೆಯಲ್ಲಿ ಜನರ ವಾಸ್ತವ್ಯ ನಿನ್ನೆ ಮೊನ್ನೆಯದ್ದಲ್ಲ…..

ಕಾರವಾರ : ಭೂ ಕುಸಿತದಿಂದ ಇನ್ನಿಲ್ಲದಂತೆ ಹಾನಿಗೀಡಾಗಿರುವ ಕಳಚೆಯಲ್ಲಿ ಜನರ ವಾಸ್ತವ್ಯ ನಿನ್ನೆ ಮೊನ್ನೆಯದ್ದಲ್ಲ. ಶತಮಾನಗಳ ಕಾಲದಿಂದ ಅಲ್ಲಿ ಮನೆಗಳಿವೆ, ಕೃಷಿ ಇದೆ. ಇಷ್ಟು ವರ್ಷದಲ್ಲಿ ಆಗದಿರುವ ದುರಂತ, ಈ ವರ್ಷ ಯಾಕಾಯಿತು ಎಂಬುದೇ ಗ್ರಾಮಸ್ಥರೆಲ್ಲ ಪ್ರಶ್ನೆಯಾಗಿದೆ. ಕಳಚೆಯಲ್ಲಿ ಅತಿ ಹೆಚ್ಚು ಹಾನಿಯಾಗಿದ್ದರೆ, ಅದರ ಸುತ್ತಮುತ್ತಲಿನ ತಳಕೆಬೈಲ್, ಕೊಡ್ಲಗದ್ದೆ, ಅರಬೈಲ್, ಹೆಗ್ಗಾರ, ಕೋಮಾರಕುಂಬ್ರಿ, ದಬ್ಬೇಸಾಲ್, ಡಬ್ಗುಳಿ, ತಾರಗಾರ, ಬೀಗಾರ್, ಬಾಗಿನಕಟ್ಟ ಹೀಗೆ ಹತ್ತಾರು ಮಜಿರೆಗಳಲ್ಲೂ ಭಾರಿ ಪ್ರಮಾಣದಲ್ಲಿ ಗುಡ್ಡದ ಮಣ್ಣು ಕುಸಿದಿದೆ. ಜನ, ಜಾನುವಾರು, ಕೃಷಿ, ಅರಣ್ಯದ…

Read More

ನಮ್ಮನ್ನು ವಲಸಿಗರು ವಲಸಿಗರು ಎಂದು ಕರೆಯಬೇಡಿ: ಮಾಜಿ ಸಚಿವ ಬಿ.ಸಿ.ಪಾಟೀಲ್

ಬೆಂಗಳೂರು : ನಮ್ಮನ್ನು ವಲಸಿಗರು ವಲಸಿಗರು ಎಂದು ಕರೆಯಬೇಡಿ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ಕಿಡಿಕಾರಿದ್ದಾರೆ. ಸಿಎಂ ಬೊಮ್ಮಾಯಿ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಲಸಿಗ, ಬಾಂಬೆ ಬಾಯ್ಸ್ ಎನ್ನುವ ಶಬ್ದ ಬಿಡಿ. ನಾವು ಬಿಜೆಪಿ ಪಕ್ಷಕ್ಕೆ ಬಂದು ಗೆದ್ದು ಮಂತ್ರಿ ಆಗಿದ್ದೇವೆ. ಹೀಗಿದ್ದರೂ ನೀವು ನಮ್ಮನ್ನು ವಲಸಿಗರು ಎಂದು ಕರೆಯೋದು ಬಿಡಲ್ವಲ್ಲ ಎಂದು ಗರಂ ಆಗಿದ್ದಾರೆ. ಸಂಪುಟ ರಚನೆ ಆಗಲಿ, ಈ ಮೊದಲು ಇದ್ದ ಇಲಾಖೆ ಬಗ್ಗೆಯಾಗಲಿ ನಾನು ಚರ್ಚೆ ಮಾಡಿಲ್ಲ. ಆದಷ್ಟು ಬೇಗ…

Read More

ಸಿಎಂ ಬೊಮ್ಮಾಯಿ ಭೇಟಿಯಾಗಲು ಬಂದು ನಿರಾಸೆಯಿಂದ ತೆರಳಿದ ಆರ್.ಶಂಕರ್

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಲು ಅವರ ನಿವಾಸಕ್ಕೆ ಬಂದ ಮಾಜಿ ಸಚಿವ ಆರ್.ಶಂಕರ್ ನಿರಾಸೆಯಿಂದ ಹಿಂದೆ ತೆರಳಬೇಕಾಯಿತು. ಸಿಎಂ ಬೊಮ್ಮಾಯಿ ಅವರ ಆರ್. ಟಿ ನಗರ ನಿವಾಸಕ್ಕೆ ಆರ್. ಶಂಕರ್ ಆಗಮಿಸಿದ್ದರು. ಆದರೆ ಆ ವೇಳೆ ಸಿಎಂ ಅಲ್ಲಿರಲಿಲ್ಲ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಶಂಕರ್, ರಾಜಕಾರಣಿ ಆಗಿ ಸಿಎಂ ಭೇಟಿ ಮಾಡುವ ಅವಶ್ಯಕತೆ ಇರುತ್ತದೆ. ನಾನು ಈಗಾಗಲೇ ಸಿಎಂ ಭೇಟಿ ಮಾಡಿದ್ದೇನೆ. ಸಂಪುಟ ರಚನೆ ಇರುವುದರಿಂದ ಏನಾದರೂ ಕೇಳೋದು ಮಾಡೋದು ಇರುತ್ತದೆ ಎಂದರು. ಸಚಿವ…

Read More

ಮೂಲ ಬಿಜೆಪಿಗರು ಹಾಲಿದ್ದಂತೆ, ಹೊರಗಿನಿಂದ ಬಂದವರು ಜೇನಿದ್ದಂತೆ : ಕೆ ಎಸ್ ಈಶ್ವರಪ್ಪ

ಬಾಗಲಕೋಟೆ: ರಾಜ್ಯದ ಬಿಜೆಪಿ ನಾಯಕರಲ್ಲಿ ಅಸಮಾಧಾನ ಎಂಬ ಪ್ರಶ್ನೆಯೇ ಇಲ್ಲ, ಇನ್ನೆರಡು ಮೂರು ದಿನಗಳಲ್ಲಿ ಕೇಂದ್ರದ ನಾಯಕರು ರಾಜ್ಯಕ್ಕೆ ಬಂದು ಅಸಮಾಧಾನ ಏನೇನಿದೆ ಎಂದು ತಿಳಿದುಕೊಂಡು ನಾಯಕರನ್ನು ಕರೆದು ಕೂರಿಸಿ ಚರ್ಚೆ ಮಾಡಿ ಬಗೆಹರಿಸುತ್ತಾರೆ. ಇಲ್ಲಿ ವಲಸಿಗರು, ಮೂಲದಿಂದಲೇ ಇರುವವರು ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹಿರಿಯ ನಾಯಕ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. ಬಾಗಲಕೋಟೆಯಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಹಾಲಿದ್ದಂತೆ.ಹೊಸಬರು ಬಂದು ಸೇರ್ಪಡೆಗೊಂಡವರು ಜೇನಿದ್ದಂತೆ. ಹಾಲು-ಜೇನು ಸೇರಿದರೆ…

Read More

ಪರಸ್ಪರ ಏಕವಚನದಲ್ಲಿ ಕಿತ್ತಾಡಿಕೊಂಡ ಬೆಂಗಳೂರಿನ ಬಿಜೆಪಿಯ ಹಿರಿಯ ಶಾಸಕರು

ಬೆಂಗಳೂರು : ಮಹಾನಗರ ಬೆಂಗಳೂರಿನ ಹಿರಿಯ ಬಿಜೆಪಿ ಶಾಸಕರಾದ ಆರ್. ಅಶೋಕ್ ಮತ್ತು ವಿ.ಸೋಮಣ್ಣ ಪರಸ್ಪರ ಏಕವಚನದಲ್ಲಿ ಕಿತ್ತಾಡಿಕೊಂಡಿರುವ ವಿಚಾರ ಇದೀಗ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮೊಬೈಲ್ ನಲ್ಲಿ ಸಂಭಾಷಣೆ ವೇಳೆ ಪರಸ್ಪರ ಏಕವಚನ ಮತ್ತು ಕೆಟ್ಟ ಪದಗಳನ್ನು ಬಳಸಿ ಜಗಳವಾಡಿಕೊಂಡಿದ್ದಾರೆ. ಆಡಿಯೋ ತುಣುಕು ಕೆಲವರಿಗೆ ಲಭ್ಯವಾಗಿದ್ದು, ಪಕ್ಷದೊಳಗೆ ಈ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ತಮ್ಮನ್ನು ಕರೆಯದೇ ದೆಹಲಿಗೆ ಹೋಗಿದ್ದ ಅಶೋಕ್, ಸಂಪುಟಕ್ಕೆ ತಮ್ಮನ್ನು ಸೇರಿಸದಂತೆ ವರಿಷ್ಠರಿಗೆ ದೂರು ನೀಡಿರಬಹುದೆಂದು ಸೋಮಣ್ಣ ಅನುಮಾನ ವ್ಯಕ್ತಪಡಿಸಿದ್ದಾರೆ….

Read More

ದೇವೇಗೌಡರ ನಿವಾಸಕ್ಕೆ ಸಿಎಂ ಬೊಮ್ಮಾಯಿ ಭೇಟಿ

ಬೆಂಗಳೂರು : ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನಿವಾಸಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡಿ ಕೆಲಕಾಲ ಜೆಡಿಎಸ್​ ವರಿಷ್ಠರ ಜತೆ ಮಾತುಕತೆ ನಡೆಸಿದರು. ಪದ್ಮನಾಭನಗರದಲ್ಲಿರುವ ನಿವಾಸಕ್ಕೆ ಭೇಟಿ ನೀಡಿದ ಸಿಎಂ, ದೇವೇಗೌಡರ ಜತೆ ಅನೌಪಚಾರಿಕವಾಗಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗೆ ಮಾಜಿ ಪ್ರಧಾನಿ ಶುಭ ಕೋರಿದರು. ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸಿದರು. ಜನತಾ ಪರಿವಾರದ ಹಳೆಯ ನೆನಪುಗಳನ್ನೂ ಮೆಲುಕು ಹಾಕಿದರು. ಮಾಜಿ ಸಚಿವರಾದ ವಿ.ಸೋಮಣ್ಣ, ಎಚ್.ಡಿ. ರೇವಣ್ಣ ಉಪಸ್ಥಿತರಿದ್ದರು.

Read More