ರೋಟರಿ ಕ್ಲಬ್ ಮುಂಡಗೋಡ : ನೂತನ ಪದಾಧಿಕಾರಿಗಳ ಆಯ್ಕೆ
ಮುಂಡಗೋಡ : ರೋಟರಿ ಕ್ಲಬ್ ಮುಂಡಗೋಡ ನೂತನ ಅಧ್ಯಕ್ಷರಾಗಿ ಶಾಜಿ ಥಾಮಸ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಬೈಜು ವಿ.ಜೆ., ಖಜಾಂಚಿಯಾಗಿ ವಸಂತ ಕೊಣಸಾಲಿ ಆಯ್ಕೆಯಾಗಿದ್ದಾರೆ. ಪತ್ರಿಕಾಗೋಷ್ಟಿ : ತಮ್ಮ ಅವಧಿಯಲ್ಲಿ ರೋಟರಿ ಕ್ಲಬ್ ನಿಂದ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಎಲ್ಲರೂ ಸಹಕಾರ ನೀಡಬೇಕೆಂದು ರೋಟರಿ ಕ್ಲಬ್ ನೂತನ ಅಧ್ಯಕ್ಷರಾದ ಶಾಜಿ ಥಾಮಸ್ ಇಂದು ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ. ಪತ್ರಕರ್ತರು ಸಮಾಜದ ಓರೆಕೋರೆಗಳನ್ನು ತಿದ್ದುವವರು, ಪತ್ರಕರ್ತರು ಸೈನಿಕರಿದ್ದಂತೆ ಹಾಗೂ ಕೊರೊನಾ ವಾರಿಯರ್ಸ ಎಂದು ಅವರು ನುಡಿದರು….