ಕೋಗಿಲಬನದ ರಸ್ತೆಯಲ್ಲಿ ರಾಜಾರೋಷವಾಗಿ ತಿರುಗಾಡಿದ ಮೊಸಳೆ

ದಾಂಡೇಲಿ : ದಾಂಡೇಲಿಯ ಕಾಳಿ ನದಿಯ ಕೋಗಿಲಬನದ ರಸ್ತೆಯಲ್ಲಿ ಇಂದು ದೊಡ್ಡದಾದ ಮೊಸಳೆಯೊಂದು ಆಹಾರ ಅರಸಿ ಬಂದು ರಾಜಾರೋಷವಾಗಿ ತಿರುಗಾಡುತ್ತಿತ್ತು. ಆಗಾಗ ಬಾಯ್ದೆರೆದು ಹೆದರಿಸುತ್ತಿತ್ತು. ಮೊಸಳೆಯ ಈ ಸಂಚಾರ ಜನರನ್ನು ಭಯ ಬೀಳಿಸಿತ್ತು. ರಸ್ತೆಯ ಅಕ್ಕ ಪಕ್ಕದ ಮನೆಯವರು ಬಾಗಿಲು ಹಾಕಿಕೊಂಡು ಮನೆಯೊಳಗೆ ಸೇರಿದ್ದರು. ಕೆಲವರು ಮರದಿಂದಲೇ ವಿಡಿಯೋ ಮಾಡುತ್ತಿದ್ದರು. ಸುದ್ದಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳೀಯರ ಸಹಕಾರದೊಂದಿಗೆ ಆ ಮೊಸಳೆಯನ್ನು ಕಾಳಿನದಿಗೆ ಹೊಂದಿಕೊಂಡಿದ್ದ ನಾಲಾದೊಳಗೆ ಸೇರುವ ಹಾಗೆ ಮಾಡಿದರು. ಮನೆಯೆದುರು ಬಂದು ಜನರನ್ನು ಭಯ…

Read More

ನೀರು ಸೇದಲು ಹೋಗಿ ತೆರೆದ ಬಾವಿ ಬಿದ್ದ ವೃದ್ದೆಯ ರಕ್ಷಣೆ

ಭಟ್ಕಳ : ತೆರೆದ ಬಾವಿಯಲ್ಲಿ ನೀರು ಸೇದಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದ ವೃದ್ಧೆಯನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣೆ ಮಾಡಿದ ಘಟನೆ ಭಟ್ಕಳ ತಾಲೂಕಿನ ಸೋಡಿಗದ್ದೆಯಲ್ಲಿ ಇಂದು ನಡೆದಿದೆ. ಸೋಡಿಗದ್ದೆ ನಿವಾಸಿಯಾಗಿರುವ ನಾಗಮ್ಮ (60) ತನ್ನ ಮನೆಯ ತೆರೆದ ಬಾವಿಯಿಂದ ನೀರು ಸೇದುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಯಲ್ಲಿ ಬಿದ್ದಿದ್ದು, ತಕ್ಷಣ ವಿಷಯ ತಿಳಿದ ಮನೆಯವರು ಅಗ್ನಿಶಾಮಕ ದಳ ಸಿಬ್ಬಂದಿಗೆ ಕರೆ ಮಾಡಿದ್ದಾರೆ.ತಕ್ಷಣ ಕರೆಗೆ ಸ್ಪಂದಿಸಿ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ…

Read More

ಶಿರಸಿ : ಅಪಘಾತ, ಬೈಕ್ ಸವಾರ ಸಾವು

 ಶಿರಸಿ : ಬೈಕ್‌ ಸ್ಕಿಡ್‌ ಆಗಿ ಪಿಕಪ್‌ ಗೆ ಗುದ್ದಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ಬೈಕ್‌ ಸವಾರನೋರ್ವ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹಿರೇಕೈಗದ್ದೆ ತಿರುವಿನಲ್ಲಿ ಇಂದು ಸಂಭವಿಸಿದೆ. ಬೈಕಿನಲ್ಲಿ ಶಿರಸಿಯಿಂದ ಹೆಗಡೆಕಟ್ಟಾ ಸಂಚರಿಸುವ ಸಂದರ್ಭದಲ್ಲಿ ಅಜಾಗರೂಕತೆ ಚಾಲನೆಯಿಂದ ಈ ಘಟನೆ ಸಂಭವಿಸಿದೆ. ಬೈಕ್‌ ನಲ್ಲಿ ಹಿಂಬದಿ ಕುಳಿತಿದ್ದ ಮಹಿಳೆಗೆ ಗಾಯಗಳಾಗಿವೆ. ಬೈಕ್‌ ನಲ್ಲಿ ತೆರಳುತ್ತಿರುವ ಸಂದರ್ಭದಲ್ಲಿ ಬೈಕ್‌ ಸ್ಕಿಡ್‌ ಆಗಿದ್ದು,ಬೈಕ್‌ ನ್ನು ನಿಯಂತ್ರಿಸಲಾಗದೆ ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಸಂಭವಿಸಿದೆ. ಈ…

Read More

ಮನೆ ಮದ್ದು

ನಿಯಮಿತವಾಗಿ ಬೆಳ್ಳುಳ್ಳಿಯನ್ನು ಆಹಾರದ ಜೊತೆ ಸೇವಿಸುವುದರಿಂದ ಹಸಿವು ಹೆಚ್ಚುತ್ತದೆ. ಜೀರ್ಣಶಕ್ತಿ ವೃದ್ಧಿಗೊಳ್ಳುತ್ತದೆ. ನರ ದೌರ್ಬಲ್ಯ ತೊಲಗುತ್ತದೆ.

Read More

ಅಧ್ಯಕ್ಷರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು

ಮುಂಡಗೋಡ : ಕಳೆದ 3 ತಿಂಗಳಿಂದ ಸಾಮಾನ್ಯ ಸಭೆ ನಡೆದಿಲ್ಲ. ಆದರೇ ಇಂದಿನ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರ ಗಮನಕ್ಕೆ ತರದೇ ಕ್ರಿಯಾ ಯೋಜನೆ ಮಾಡಲು ಈಗ ಸಭೆಯಲ್ಲಿ ಮಂಡಿಸಲು ಹೊರಟಿದ್ದಾರೆ ಎಂದು p. ಪ.ಪಂ.ಉಪಾಧ್ಯಕ್ಷರಾದ ಮಂಜುನಾಥ ಹರಮಲಕರ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶೇಖರ ಲಮಾಣಿ ಅವರು ಪ.ಪಂ. ಅಧ್ಯಕ್ಷರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.     2021-22 ನೇ ಸಾಲಿನ ಎಸ್.ಎಫ್ ಸಿ ಮುಕ್ತ ನಿಧಿಯಡಿಯಲ್ಲಿ ಹಣ ನಿಗಧಿಯಾದ 30ಲಕ್ಷರೂ. ಕ್ರಿಯಾ ಯೋಜನೆಯಲ್ಲಿ ಪ.ಪಂ….

Read More

ಮನೆ ಮದ್ದು

ಗಂಟಲಿನ ರೋಗಗಳಿಗೆ ಅನಾನಸ್ ಹಣ್ಣಿನ ರಸ ಉತ್ತಮ ಔಷಧಿ. ಮಕ್ಕಳಿಗೆ ಈ ಹಣ್ಣಿನ ರಸವನ್ನು ಕುಡಿಸುವುದರಿಂದ ಅವರ ಜೀರ್ಣ ಶಕ್ತಿ ಹೆಚ್ಚುತ್ತದೆ.

Read More

ಬನವಾಸಿ ಭಾಗದಲ್ಲಿ ಹೆಬ್ಬಾರ ರೇಶನ್ ಕಿಟ್ ವಿತರಣೆ

ಶಿರಸಿ : ಮಾನ್ಯ ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ್ ಅವರು ಇಂದು ತಾಲೂಕಿನ ಬನವಾಸಿ ಹೋಬಳಿ ವ್ಯಾಪ್ತಿಯಲ್ಲಿ ಉಂಚಳ್ಳಿ, ಭಾಶಿ ಹಾಗೂ ಬನವಾಸಿ  ಗ್ರಾಮ ಪಂಚಾಯತ ವ್ಯಾಪ್ತಿಯ ಗ್ರಾಮಗಳಲ್ಲಿ ” ಹೆಬ್ಬಾರ್ ರೇಷನ್ ಕಿಟ್ ” ಅನ್ನು ಸಾಂಕೇತಿಕವಾಗಿ ವಿತರಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.   ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾದ ವೆಂಕಟೇಶ ನಾಯಕ, ಗ್ರಾಮೀಣ ಮಂಡಲಾಧ್ಯಕ್ಷರಾದ ಎನ್.ವಿ.ಹೆಗಡೆ, ಯುವ ನಾಯಕರಾದ ವಿವೇಕ್ ಹೆಬ್ಬಾರ್ ಪ್ರಮುಖರಾದ ದ್ಯಾಮಣ್ಣ   ದೊಡ್ಮನಿ ಹಾಗೂ ಗ್ರಾಮ‌ ಪಂಚಾಯತ…

Read More

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಿ : ಬಿ.ಎಸ್.ವೈ.

ಬೆಂಗಳೂರು : ಎತ್ತಿನಹೊಳೆ, ಭದ್ರಾ ಮೇಲ್ದಂಡೆ ಯೋಜನೆಗಳ ಕಾಮಗಾರಿಗಳನ್ನು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸುವಂತೆ ಸಿ.ಎಂ. ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.       ಮಂಗಳವಾರ ಇವೆರಡು ಯೋಜನೆಗಳ ಕುರಿತಾಗಿ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದ ಬಿ.ಎಸ್.ಯಡಿಯೂರಪ್ಪ ಎತ್ತಿನಹೊಳೆ ಯೋಜನೆಯಲ್ಲಿ ಈವರೆಗೆ 9003.86 ಕೋಟಿರೂ. ವೆಚ್ಚವಾಗಿದ್ದು, ಮೊದಲ ಹಂತದಲ್ಲಿ ಜುಲೈ ಅಂತ್ಯದೊಳಗೆ ವೇದಾವತಿ ವ್ಯಾಲಿಗೆ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

Read More