ನಿಜವಾದ ಕೊರೊನಾ ವಾರಿಯರ್ಸ ಪೌರ ಕಾರ್ಮಿಕರು : ಪ್ರಶಾಂತ ದೇಶಪಾಂಡೆ
ಮುಂಡಗೋಡ : ಕೊರೊನಾ ವಾರಿಯರ್ಸ ಎಂದು ವೈದ್ಯರಿಗೆ ಮತ್ತು ನರ್ಸಗಳಿಗೆ ಹೇಳುತ್ತೇವೆ. ಆದರೆ ನಿಜವಾದ ಕೊರೊನಾ ವಾರಿಯರ್ಸ ಪೌರ ಕಾರ್ಮಿಕರು ಎಂದು ಕೆ.ಪಿ.ಸಿ.ಸಿ ಸದಸ್ಯ ಪ್ರಶಾಂತ ದೇಶಪಾಂಡೆ ಹೇಳಿದ್ದಾರೆ. ಶುಕ್ರವಾರ ಅವರು ಪಟ್ಟಣ ಪಂಚಾಯತ ಆವರಣದಲ್ಲಿ ಪೌರ ಕಾರ್ಮಿಕರಿಗೆ ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ವತಿಯಿಂದ ರೇಷನ ಕಿಟ್ ನೀಡಿ ಮಾತನಾಡುತ್ತಿದ್ದರು. ಪೌರ ಕಾರ್ಮಿಕರು ಕಸ ವಿಲೇವಾರಿ ಮಾಡುವುದರ ಜೊತೆಗೆ ಸ್ಮಶಾನ ಸ್ವಚ್ಚ ಮಾಡುತ್ತಾರೆ. ಪೌರ ಕಾರ್ಮಿಕರು ಲಾಕ್ ಡೌನ ಸಂದರ್ಭದಲ್ಲಿ ತಮ್ಮ ಪರಿವಾರದ ಚಿಂತೆ…
ಪ್ರಶಾಂತ ದೇಶಪಾಂಡೆ ಅಧ್ಯಕ್ಷತೆಯಲ್ಲಿ ಕಾಂಗ್ರೆಸ ಮುಖಂಡರ ಸಭೆ
ಮುಂಡಗೋಡ : ಜಿಲ್ಲಾ ಪಂಚಾಯತ ತಾಲೂಕಾ ಪಂಚಾಯತ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಕೆ.ಪಿ.ಸಿ.ಸಿ ಸದಸ್ಯ ಪ್ರಶಾಂತ ದೇಶಪಾಂಡೆ ಅಧ್ಯಕ್ಷತೆಯಲ್ಲಿ ಮುಖಂಡರ ಸಭೆಯನ್ನು ನಡೆಸಲಾಯಿತು. ಕಳೆದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಎಷ್ಟು ಹುಮ್ಮಸ್ಸಿನಿಂದ ಕೆಲಸ ಮಾಡಿದ್ದಾರೋ ಅದೇ ರೀತಿಯಲ್ಲಿ ಮುಂಬರುವ ಜಿಲ್ಲಾ ಪಂಚಾಯತ ,ತಾಲೂಕ ಪಂಚಾಯತ ಚುನಾವಣೆಯಲ್ಲಿ ಕೆಲಸ ಮಾಡಬೇಕು ಈಗಿನಿಂದಲೇ ಪಕ್ಷದ ಸಂಘಟನೆಗೆ ಕಾರ್ಯಕರ್ತರು ತೊಡಗಿಕೊಳ್ಳಬೇಕು ಅಂತಾ ಸೂಚಿಸಿದರು. ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಅಶೋಕ ಶಿರ್ಸಿಕರ, ನಾಗರಾಜ್ ನಾರ್ವೇಕರ ,ದೀಪಕ…
ಬೈಕಗೆ ಗುದ್ದಿದ ಟ್ಯಾಂಕರ್ : ಬೈಕ್ ಸವಾರ ಸಾವು
ಕುಮಟಾ : ಕುಮಟಾ ತಾಲೂಕಿನ ಮಿರ್ಜಾನ ಸಮೀಪ ಅತಿ ವೇಗದಿಂದ ಬಂದ ಟ್ಯಾಂಕರೊಂದು ಬೈಕ್ ಸವಾರನಿಗೆ ಗುದ್ದಿದ ಪರಿಣಾಮವಾಗಿ ಬೈಕ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಕಿಮಾನಿ ಗ್ರಾಮದ ರಮೇಶ ಹರಿಕಂತ್ರ ಎಂದು ಗುರುತಿಸಲಾಗಿದೆ. ಕುಮಟಾ ಪೊಲೀಸರು ಟ್ಯಾಂಕರನ್ನು ಅಂತ್ರವಳ್ಳಿ ಸಮೀಪ ತಡೆ ಹಿಡಿದಿದ್ದು ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆಂದು ತಿಳಿದುಬಂದಿದೆ. ಲಾರಿ ತಮಿಳುನಾಡು ಮೂಲದ್ದಾಗಿದೆ.
ಮುಂಡಗೋಡ : ತಾ.ಪಂ., ಜಿ.ಪಂ. ಮೀಸಲಾತಿ ವಿವರ
ಕಾರವಾರ : ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳ ಚುನಾಯಿತ ಸದಸ್ಯರ ಅಧಿಕಾರದ ಅವಧಿ ಏಪ್ರಿಲ್ ಅಂತ್ಯದಲ್ಲೇ ಕೊನೆಗೊಂಡಿದೆ. ಕೋವಿಡ್ ಕಾರಣದಿಂದ ಚುನಾವಣೆ ವಿಳಂಬವಾಗಿದ್ದು, ಈಗಾಗಲೇ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ. ರಾಜ್ಯ ಚುನಾವಣಾ ಆಯೋಗವು, ಕರಡು ಮೀಸಲಾತಿ ಪಟ್ಟಿಯನ್ನು ಹೊರಡಿಸಿದ್ದು, ಆಕ್ಷೇಪಣೆ ಸಲ್ಲಿಸಲು ಎಂಟು ದಿನಗಳ ಕಾಲಾವಕಾಶ ನೀಡಿದೆ ಮುಂಡಗೋಡದ 6ತಾ.ಪಂ.ಕ್ಷೇತ್ರಗಳಲ್ಲಿ ಮೀಸಲಾತಿ ಪುನರಾವರ್ತನೆ… ಮುಂಡಗೋಡ ತಾಲೂಕಿನಲ್ಲಿ ಒಟ್ಟು 11 ತಾಲೂಕ ಪಂಚಾಯತ ಕ್ಷೇತ್ರಗಳಿದ್ದು, ಅವುಗಳ ಪೈಕಿ 6 ಕ್ಷೇತ್ರದಲ್ಲಿ ಈ ಹಿಂದೆ ಇದ್ದ ಮೀಸಲಾತಿ ಈ ಬಾರಿಯೂ ಮುಂದುವರೆದಿದೆ….
ಭಟ್ಕಳ ನ್ಯಾಯಾಲಯದಲ್ಲಿ ಬೆಂಕಿ ಅವಘಡ
ಭಟ್ಕಳ : ಪಟ್ಟಣದ ರಂಗಿನಕಟ್ಟೆಯಲ್ಲಿರುವ ಭಟ್ಕಳ ಜೆ.ಎಂ.ಎಫ್.ಸಿ.ನ್ಯಾಯಾಲಯದ ಕಟ್ಟಡದಲ್ಲಿ ಇಂದು ಮುಂಜಾನೆ ಅಗ್ನಿ ಅವಘಡ ನಡೆದಿದೆ.ನ್ಯಾಯಾಲಯದ ಮುಂದಿನ ಭಾಗ ಸಂಪೂರ್ಣ ಬೆಂಕಿಗಾಹುತಿಯಾಗಿದ್ದು,ದಾಖಲೆಗಳು ಸಂಪೂರ್ಣ ಸುಟ್ಟು ಕರಕಲಾಗಿದೆ. ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿರುವುದಾಗಿ ಪ್ರಥಮ ಮಾಹಿತಿಯನ್ನು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದು, ಬೆಳಿಗ್ಗೆ 4.15ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಾಗ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಹಲವು ತಾಸುಗಳ ಪ್ರಯತ್ನದಿಂದ ಬೆಂಕಿ ನಂದಿಸಿದ್ದಾರೆ. ನ್ಯಾಯಾಲಯದಲ್ಲಿದ್ದ ಸಾವಿರಾರು ಕೇಸುಗಳ ಕಡತಗಳು ಅವಘಡದಲ್ಲಿ ಸುಟ್ಟುಹೋಗಿದ್ದು,ಕಾಗದಕ್ಕೆ ಬೆಂಕಿ ಹೊತ್ತಿಕೊಂಡ ಕಾರಣ ಬೆಂಕಿಯ ತೀವ್ರತೆ…
ಅರಣ್ಯ ಸಿಬ್ಬಂದಿ ದೌರ್ಜನ್ಯ : ಉಪ ವಿಭಾಗಾಧಿಕಾರಿಗಳ ಮುಂದೆ ಅರಣ್ಯವಾಸಿಗಳ ಆಕ್ರೋಶ
ಭಟ್ಕಳ : ಅರಣ್ಯ ಸಿಬ್ಬಂದಿಗಳಿಂದ ಕಾನೂನು ಬಾಹಿರವಾದ ದೌರ್ಜನ್ಯ,ಕಿರುಕುಳ ನಿಯಂತ್ರಿಸಿ,ಇಲ್ಲದಿದ್ದಲ್ಲಿ ಅರಣ್ಯ ಅತಿಕ್ರಮಣದಾರರ ಸಹನೆಯ ಕಟ್ಟೆ ಒಡೆದೀತು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ಅಧ್ಯಕ್ಷ ರವೀಂದ್ರನಾಥ್ ನಾಯ್ಕ ಸರಕಾರಕ್ಕೆ ಎಚ್ಚರಿಸಿದ್ದಾರೆ. ಅವರು ಇಂದು ಭಟ್ಕಳ ಉಪವಿಭಾಗಾಧಿಕಾರಿ ಅವರನ್ನು ಅರಣ್ಯವಾಸಿಗಳೊಂದಿಗೆ ಭೇಟಿಯಾದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ರಾಜ್ಯ ಉಚ್ಛ ನ್ಯಾಯಾಲಯ ಮತ್ತು ಮುಖ್ಯಮಂತ್ರಿಗಳ ನಿರ್ದೇಶನವನ್ನು ನಿರ್ಲಕ್ಷಿಸುವ ಅರಣ್ಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಲಿ.ನಮ್ಮ ಸಹನೆಯನ್ನು ಪರೀಕ್ಷೀಸುವುದು ಸೂಕ್ತವಲ್ಲ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ…
ವಿವಾಹಿತ ಮಹಿಳೆ ಆತ್ಮಹತ್ಯೆ : ಗಂಡ, ಅತ್ತೆ ಮೇಲೆ ಪ್ರಕರಣ ದಾಖಲು
ಮುಂಡಗೋಡ: ವಿವಾಹಿತ ಮಹಿಳೆಯೊಬ್ಬಳು ಮನನೊಂದು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ರಾತ್ರಿ ತಾಲೂಕಿನ ಕೊಪ್ಪ ಗ್ರಾಮದಲ್ಲಿ ಜರುಗಿದೆ. ಸ್ವಾತಿ ಮಂಜುನಾಥ ಹೊಸೂರ (26) ಎಂಬವಳೇ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಯಾಗಿದ್ದಾಳೆ. ಸ್ವಾತಿ ಮದುವೆಯಲ್ಲಿ ವರದಕ್ಷಿಣೆಯನ್ನು ನೀಡಿಲ್ಲ ಹಾಗೂ ಗಂಡು ಮಕ್ಕಳು ಸಹ ಜನಿಸಿಲ್ಲ ಎಂದು ಸ್ವಾತಿಯ ಗಂಡ ಮಂಜುನಾಥ ಹೊಸೂರ ಹಾಗೂ ತಾಯವ್ವ ಕಲ್ಲಪ್ಪ ಹೊಸೂರ ಎಂಬವರು ಸೇರಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಾ ಬಂದಿದ್ದು ಇದರಿಂದ ಮನನೊಂದ ನನ್ನ ಮಗಳು…