Raj Newsline

ಗೋಡಂಬಿ ಉದ್ಯಮಿಯೊಬ್ಬರ ಬಳಿ 25ಲಕ್ಷರೂ. ಇದ್ದ ಬ್ಯಾಗ್ ಕಸಿದು ನಾಪತ್ತೆಯಾದ ಇಬ್ಬರು ಅಪರಿಚಿತರು

ಮುಂಡಗೋಡ : ಗೋಡಂಬಿ ಉದ್ಯಮಿಯೊಬ್ಬರು ಗೋಡಂಬಿ ಬೀಜ ಖರೀದಿಗಾಗಿ ಮುಂಡಗೋಡ ತಾಲೂಕಿನ ಮಳಗಿಗೆ ಬಂದ ವೇಳೆಯಲ್ಲಿ ಜಲಾಶಯದ ಹತ್ತಿರ ಇಬ್ಬರು ಅಪರಿಚಿತರು ಉದ್ಯಮಿ ಕೈಯಲ್ಲಿದ್ದ ಬ್ಯಾಗ್ ಕಸಿದು ನಾಪತ್ತೆಯಾದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಚಿಕ್ಕೋಡಿಯ ಗೋಡಂಬಿ ಉದ್ಯಮ ಶಿವನಗೌಡ ಪಾಟೀಲ ಹಾಗೂ ಅವನ ಸ್ನೇಹಿತ ಅಸ್ಲಾಂ ನದಾಫ ಇಬ್ಬರು ಸೇರಿ ಗೋಡಂಬಿ ಬೀಜ ಖರೀದಿಗೆ ತಾಲೂಕಿನ ಮಳಗಿಯ ಧರ್ಮಾ ಜಲಾಶಯದ ಹತ್ತಿರ ಬಂದಾಗ ಇಬ್ಬರು  ಅಪರಿಚಿತರು ಅವರನ್ನು ಮಾತನಾಡಿಸಿದ್ದಾರೆ. ನಂತರ ಅವರು ಮುಂದಕ್ಕೆ ಹೋಗುತ್ತಿದ್ದಂತೆ ಇಬ್ಬರು…

Read More

ಎಸ್.ಎಸ್.ಎಲ್.ಸಿ. ಪರೀಕ್ಷೆಯ ಪೂರ್ವಭಾವಿ ಸಭೆ

ಮುಂಡಗೋಡ : ಎಸ್.ಎಸ್.ಎಲ್.ಸಿ. ಪರೀಕ್ಷೆಯ ಕುರಿತು ಪೂರ್ವಭಾವಿ ಸಭೆಯು ತಹಶೀಲದಾರ ಶ್ರೀಧರ ಮುಂದಲಮನಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆಯಿತು.    ಪರೀಕ್ಷೆಯ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು.    ಸಭೆಯಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ ಕಟ್ಟಿ, ಬಿ.ಇ.ಒ. ವಿ.ವಿ.ನಡುವಿನಮನಿ, ಸಮಾಜ ಕಲ್ಯಾಣಾಧಿಕಾರಿ, ರಮೇಶ ಅಂಬಿಗೇರ, ಶಾಲಾ ಮುಖ್ಯಸ್ಥರು, ಅಧಿಕಾರಿಗಳು ಮುಂತಾದವರಿದ್ದರು. 

Read More

ಮಳಗಿಯ ಸೆಂಟ್ ಮಿಲಾಗ್ರಿಸ್ ಬ್ಯಾಂಕ್ ನಲ್ಲಿ ಕಳ್ಳತನ

ಮುಂಡಗೋಡ : ತಾಲೂಕಿನ  ಮಳಗಿ ಗ್ರಾಮದಲ್ಲಿನ  ಸೆಂಟ್ ಮಿಲಾಗ್ರಿಸ್  ಬ್ಯಾಂಕ್ ನ   ಬಾಗಿಲು  ಮುರಿದು  53ಸಾವಿರ ರೂ. ಕಳ್ಳತನ  ಮಾಡಿಕೊಂಡು  ಹೋದ  ಘಟನೆ  ಗುರುವಾರ ರಾತ್ರಿ  ಜರುಗಿದೆ. ಮಳಗಿ  ಪೋಲಿಸ್  ಠಾಣೆಯಿಂದ  ನೂರು ಮೀಟರ್  ಅಂತರದಲ್ಲಿರುವ  ಸೆಂಟ್  ಮಿಲಾಗ್ರಿಸ್  ಬ್ಯಾಂಕ್  ಇದ್ದು  ಬ್ಯಾಂಕ್ ನ  ಬಾಗಿಲು  ಮುರಿದು  ಒಳನುಗ್ಗಿರುವ  ಕಳ್ಳರು  ಕಬ್ಬಿಣದ  ಕಪಾಟಿನಲ್ಲಿ ದ್ದ  53ಸಾವಿರ  ರೂ. ಹಣವನ್ನು  ಕಳ್ಳತನ  ಮಾಡಿಕೊಂಡು  ಹೋಗಿದ್ದು   ಸ್ಥಳಕ್ಕೆ  ಭೇಟಿ  ನೀಡಿರುವ  ಪೋಲಿಸರು   ಪರಿಶೀಲನೆ  ನಡೆಸಿದ್ದಾರೆ.

Read More

ಜಿ.ಪಂ., ತಾ.ಪಂ. ಚುನಾವಣೆ ಮುಂದೂಡಿಕೆ : ಆಕಾಂಕ್ಷಿಗಳಿಗೆ ಬಿಗ್ ಶಾಕ್

ಬೆಂಗಳೂರು : ಈಗಾಗಲೇ ಜಿಲ್ಲಾ ಮತ್ತು ತಾಲೂಕು ಪಂಚಾಯಿಗಳಿಗೆ ರಾಜ್ಯ ಸರ್ಕಾರದಿಂದ ಮೀಸಲಾತಿಯನ್ನು ಪ್ರಕಟಗೊಳಿಸಲಾಗಿದೆ. ಇನ್ನೇನು ಚುನಾವಣೆ ಕೂಡ ಸದ್ಯದಲ್ಲೇ ಘೋಷಣೆ ಕೂಡ ಆಗಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಆದ್ರೇ ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರವು ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆಯನ್ನು ಡಿಸೆಂಬರ್ ವರೆಗೆ ಮುಂದೂಡುವಂತ ನಿರ್ಣಯವನ್ನು, ಇಂದಿನ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡಿದೆ. ಈ ಮೂಲಕ ಜಿಲ್ಲಾ, ತಾಲೂಕು ಪಂಚಾಯ್ತಿ ಚುನಾವಣೆ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್ ನೀಡಿದೆ. ಈ ಕುರಿತಂತೆ ಇಂದಿನ ಮುಖ್ಯಮಂತ್ರಿ…

Read More

ಶಿಂಗನಳ್ಳಿಯಲ್ಲಿ ಮನೆ ಕುಸಿದು ಹಾನಿ

ಮುಂಡಗೋಡ : ತಾಲೂಕಿನ ಕಾತೂರ ಗ್ರಾಮ ಪಂಚಾಯತ ವ್ಯಾಪ್ತಿಯ ಶಿಂಗನಳ್ಳಿ ಗ್ರಾಮದಲ್ಲಿ ಮನೆಯೊಂದು ಕುಸಿದು ಬಿದ್ದು ಹಾನಿ ಸಂಭವಿಸಿದ ಘಟನೆ ಬುಧವಾರ ರಾತ್ರಿ ಜರುಗಿದೆ.    ಶಿಂಗನಳ್ಳಿ ಗ್ರಾಮದ ರವಿ ಸಹದೇವಪ್ಪ ಪಾಟೀಲ ಎಂಬವರ ಮನೆಯೆ ಮಳೆಗೆ ಕುಸಿದು ಬಿದ್ದಿದೆ. ಕಳೆದ 3-4 ದಿನಗಳಿಂದ ತಾಲೂಕಿನಲ್ಲಿ ಮಳೆ ಸುರಿದ ಕಾರಣ ಈ ಮನೆ ಕುಸಿದು ಬಿದ್ದಿದೆ. ತುಂಬಾ ಹಳೆಯ ಮನೆಯಾಗಿದ್ದ ಕಾರಣ ನಿರಂತರ ಮಳೆಗೆ ಕುಸಿದು ಬಿದ್ದಿದೆ ಎನ್ನಲಾಗಿದೆ.

Read More

ನಕ್ಕು ಬಿಡಿ…..!

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ಕೋಟಿರೂಪಾಯಿ ಅಂತಾರೆ ಅಂದ ಮೇಲೆ ಮನೆಯಲ್ಲಿ ಎರಡು ಕೋಟಿ ರೂಪಾಯಿ ಇರಲಿ ಅಂತ ಆಸೆ ಪಡುವುದರಲ್ಲಿ ತಪ್ಪೇನು…..? ~ ಮಂಜುನಾಥ ಹರಮಲಕರ, ಉಪಾಧ್ಯಕ್ಷರು ಪ.ಪಂ. ಮುಂಡಗೋಡ

Read More

ಬಸ್ ನಿಲ್ದಾಣದಲ್ಲಿ ಶೌಚಾಲಯ ತೆರವು : ಪ್ರಯಾಣಿಕರ ಪರದಾಟ

ಮುಂಡಗೋಡ : ನೂತನವಾಗಿ ನಿರ್ಮಾಣವಾಗುತ್ತಿರುವ ಬಸ್ ನಿಲ್ದಾಣದ ಹಿಂಬದಿಯಲ್ಲಿದ್ದ ತಾತ್ಕಾಲಿಕ ಶೌಚಾಲಯ ತೆರವುಗೊಳಿಸದ ಪರಿಣಾಮ ಬಸ್ ನಿಲ್ದಾಣದಲ್ಲಿ ಶೌಚಾಲಯವಿಲ್ಲದೆ ಪ್ರಯಾಣಿಕರು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಪಟ್ಟಣದಲ್ಲಿ ಮೂರುಕೋಟಿರೂ. ಅನುದಾನದಲ್ಲಿ ಹೈಟೇಕ್ ಬಸ್ ನಿಲ್ದಾಣ ನಿರ್ಮಿಸ ಲಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದು ಆದರೆ ಕೋವಿಡ್ ನಿಂದ ಸರಕಾರ ಲಾಕ್‌ಡೌನ್ ಜಾರಿ ಮಾಡಿದ ಪರಿಣಾಮ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು ಇದೀಗ ಮುಕ್ತಾಯ ಹಂತ ತಲುಪಿದೆ. ಕೆಲವೆ ತಿಂಗಳಲ್ಲಿ ಹೈಟೆಕ್ ಬಸ್ ನಿಲ್ದಾಣ ಸಾರ್ವಜನಿಕರ ಬಳಕೆಗೆ ಸಿಗಲಿದೆ….

Read More