ವನ್ನಳ್ಳಿ ಬಂದರನಲ್ಲಿ ದೋಣಿ ನಿಲ್ಲಿಸಲು ಮೀನುಗಾರರಿಗೆ ತೊಂದರೆ
ಕುಮಟಾ : ಕುಮಟಾ ಪಟ್ಟಣದ ವನ್ನಳ್ಳಿಯ ಬಂದರ್‌ನಲ್ಲಿ ನಿರ್ಮಿಸಲಾದ ಅವೈಜ್ಞಾನಿಕ ತಡೆಗೋಡೆ ಕಾಮಗಾರಿ ಬಿರುಗಾಳಿ ರಭಸಕ್ಕೆ ಕುಸಿದು ಬಿದ್ದಿದ್ದರಿಂದ ಮೀನುಗಾರರಿಗೆ ದಕ್ಕೆಯಲ್ಲಿ ದೋಣಿ ನಿಲ್ಲಿಸಲು ತೊಂದರೆಯಾಗಿದೆ. ಕುಮಟಾ ಪಟ್ಟಣದ ವನ್ನಳ್ಳಿಯ ಬಂದರ್‌ನಲ್ಲಿ ಎದುರಾಗುವ ಸಮುದ್ರಕೊರೆತ ಮತ್ತು ಅಲೆಯ ಆರ್ಭಟದಿಂದಾಗುವ ನಷ್ಟವನ್ನು ತಡೆಯಲು ಈ ಭಾಗದಲ್ಲಿ ಸಮುದ್ರಕ್ಕೆ ಅಡ್ಡಲಾಗಿ ತಡೆಗೋಡೆ ನಿರ್ಮಿಸಲಾಗಿದೆ. ಆದರೆ ಈ ತಡೆಗೋಡೆ ಕಾಮಗಾರಿ ವೈಜ್ಞಾನಿಕವಾಗಿದ್ದರಿಂದ ಕೆಲವೇ ವರ್ಷಗಳಲ್ಲಿ ತಡೆಗೋಡೆ ಕುಸಿದು,ಕಲ್ಲುಗಳೆಲ್ಲ ಸಮುದ್ರ ಪಾಲಾಗಿದೆ. ಇದರಿಂದ ದೋಣಿ ನಿಲ್ಲುವ ದಕ್ಕೆಯಲ್ಲೂ ಕಲ್ಲುಗಳು ಬಂದು ಬಿದ್ದಿದ್ದರಿಂದ ದೋಣಿ ನಿಲ್ಲಿಸಲಾಗದ…