ಮನೆ ಮದ್ದು

ಕಣ್ಣುರಿ, ಕಣ್ಣುನೋವು, ಕಣ್ಣುಬಾವು ಇದ್ದಾಗ ಕೊತ್ತಂಬರಿ ಬೀಜದ ಕಷಾಯ ಮಾಡಿ ಅದರಲ್ಲಿ ದಿನಕ್ಕೆ ಮೂರು ಬಾರಿ ಕಣ್ಣು ತೊಳೆದರೆ ಕಡಿಮೆಯಾಗುತ್ತದೆ.

Read More

ಕೊಲೆಯಾದವನ ಪತ್ನಿಯೂ ಸೇರಿದಂತೆ ಮೂವರು ಸಂಬಂಧಿಕರ ಬಂಧನ

ಯಲ್ಲಾಪುರ: ತನ್ನ ಗಂಡನನ್ನು ಕೊಲೆ ಮಾಡಿ ನಂತರ ಕಾಣೆಯಾಗಿದ್ದಾನೆ ಎಂದು ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ ಕೊಲೆಯಾದವನ ಪತ್ನಿಯೂ ಸೇರಿದಂತೆ ಮೂವರು ಸಂಬಂಧಿಕರನ್ನು  ಪೋಲಿಸರು ಬಂಧಿಸಿದ್ದಾರೆ.  ತಾಲೂಕಿನ  ಬಳಗಾರದ ಗ್ರಾಮದ ಚಿಕ್ಕಮಾವಳ್ಳಿ ಯ ನಿವಾಸಿ ಕೂಲಿ ಕೆಲಸ ಮಾಡುತ್ತಿದ್ದ  ರಾಜೇಶ ನಾರಾಯಣ ನಾಯ್ಕ(೨೯) ಕೊಲೆಯಾದನಾಗಿದ್ದಾನೆ. ಅವನ ಪತ್ನಿ  ಶ್ವೇತಾ ರಾಜೇಶ  ನಾಯ್ಕ (೨೯ )  ದೀಪಕ ಬುದ್ದಾ ಮರಾಠಿ ( ೫೩ )( ಮೃತನ ಮಾವ ) , ಗಂಗಾಧರ  ದೀಪಕ ಮರಾಠಿ (೨೬ ವರ್ಷ) (…

Read More

ಕೋವಿಡ್ ಲಸಿಕೆ ಪಡೆದ 31,944 ಜನರು

ಮುಂಡಗೋಡ : ಈವರೆಗೆ ಮುಂಡಗೋಡ ತಾಲೂಕಿನಲ್ಲಿ 31,944 ಜನರು ಕೋವಿಡ ಲಸಿಕೆ ಪಡೆದಿದ್ದಾರೆ.     1ನೇ ಡೋಸ ಲಸಿಕೆಯನ್ನು 25,747 ಜನರು ಮತ್ತು 2ನೇ ಡೋಸ್ ಲಸಿಕೆಯನ್ನು 6,197 ಜನರು ಪಡೆದಿದ್ದಾರೆ ಎಂದು ತಹಶೀಲದಾರ ಶ್ರೀಧರಮುಂದಲಮನಿ ತಿಳಿಸಿದ್ದಾರೆ.

Read More

ವನ್ನಳ್ಳಿ ಬಂದರನಲ್ಲಿ ದೋಣಿ ನಿಲ್ಲಿಸಲು ಮೀನುಗಾರರಿಗೆ ತೊಂದರೆ

ಕುಮಟಾ : ಕುಮಟಾ ಪಟ್ಟಣದ ವನ್ನಳ್ಳಿಯ ಬಂದರ್‌ನಲ್ಲಿ ನಿರ್ಮಿಸಲಾದ ಅವೈಜ್ಞಾನಿಕ ತಡೆಗೋಡೆ ಕಾಮಗಾರಿ ಬಿರುಗಾಳಿ ರಭಸಕ್ಕೆ ಕುಸಿದು ಬಿದ್ದಿದ್ದರಿಂದ ಮೀನುಗಾರರಿಗೆ ದಕ್ಕೆಯಲ್ಲಿ ದೋಣಿ ನಿಲ್ಲಿಸಲು ತೊಂದರೆಯಾಗಿದೆ. ಕುಮಟಾ ಪಟ್ಟಣದ ವನ್ನಳ್ಳಿಯ ಬಂದರ್‌ನಲ್ಲಿ ಎದುರಾಗುವ ಸಮುದ್ರಕೊರೆತ ಮತ್ತು ಅಲೆಯ ಆರ್ಭಟದಿಂದಾಗುವ ನಷ್ಟವನ್ನು ತಡೆಯಲು ಈ ಭಾಗದಲ್ಲಿ ಸಮುದ್ರಕ್ಕೆ ಅಡ್ಡಲಾಗಿ ತಡೆಗೋಡೆ ನಿರ್ಮಿಸಲಾಗಿದೆ. ಆದರೆ ಈ ತಡೆಗೋಡೆ ಕಾಮಗಾರಿ ವೈಜ್ಞಾನಿಕವಾಗಿದ್ದರಿಂದ ಕೆಲವೇ ವರ್ಷಗಳಲ್ಲಿ ತಡೆಗೋಡೆ ಕುಸಿದು,ಕಲ್ಲುಗಳೆಲ್ಲ ಸಮುದ್ರ ಪಾಲಾಗಿದೆ. ಇದರಿಂದ ದೋಣಿ ನಿಲ್ಲುವ ದಕ್ಕೆಯಲ್ಲೂ ಕಲ್ಲುಗಳು ಬಂದು ಬಿದ್ದಿದ್ದರಿಂದ ದೋಣಿ ನಿಲ್ಲಿಸಲಾಗದ…

Read More

ಮುಂಡಗೋಡನಲ್ಲಿ ರವಿವಾರ ಹೆಬ್ಬಾರ್ ರೇಶನ್ ಕಿಟ್ ವಿತರಣೆ

ಮುಂಡಗೋಡ : ದಿ.11ರಂದು ರವಿವಾರ ಮುಂಡಗೋಡ ನಗರದಲ್ಲಿ ಹೆಬ್ಬಾರ್ ರೇಶನ್ ಕಿಟ್ ನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರ್ ವಿತರಿಸಲಿದ್ದಾರೆ.    ದಿ.11ರಂದು ಸಂಜೆ 4ಗಂಟೆಗೆ ಹಳೂರ ಓಣಿಯಲ್ಲಿ, 4-45ಕ್ಕೆ ಟೌನಹಾಲನಲ್ಲಿ, 5-15ಕ್ಕೆ ಗಾಂಧಿನಗರದಲ್ಲಿ ಸಚಿವ ಶಿವರಾಮ ಹೆಬ್ಬಾರ ಅವರು ಹೆಬ್ಬಾರ್ ರೇಶನ್ ಕಿಟ್ ವಿತರಿಸಲಿದ್ದಾರೆ. ನಂತರ ಮೀನುಗಾರಿಕೆ ಇಲಾಖೆಯಲ್ಲಿ ಪರಿಕರಗಳನ್ನು ಸಚಿವರು ವಿತರಿಸಲಿದ್ದಾರೆ.

Read More

ಅನಧಿಕೃತ ಚಿರೇಕಲ್ಲು ಕ್ವಾರಿಗಳ ಮೇಲೆ ಅಧಿಕಾರಿಗಳ ದಾಳಿ

ಭಟ್ಕಳ : ತಾಲೂಕಿನ ಮಾರುಕೇರಿ ಪಂಚಾಯತಿ ವ್ಯಾಪ್ತಿಯ ಕೋಟಖಂಡದಲ್ಲಿ ಅನಧಿಕೃತವಾಗಿ ಕೆಂಪುಕಲ್ಲಿನ ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆಕಾರವಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ತಂಡ ಮತ್ತು ಭಟ್ಕಳ ಕಂದಾಯ ಇಲಾಖೆಯ ತಂಡ ದಾಳಿ ನಡೆಸಿ ಯಂತ್ರೋಪಕರಣಗಳನ್ನು ವಶಕ್ಕೆ ಪಡೆದಿದ್ದಾರೆ. ಮಾರುಕೇರಿ ಪಂಚಾಯತಿ ವ್ಯಾಪ್ತಿಯಲ್ಲಿ ಅನಧಿಕೃತ ಕೆಂಪುಕಲ್ಲಿನ ಗಣಿಗಾರಿಕೆ ನಡೆಯುತ್ತಿರುವ ಕುರಿತು ಗಣಿ ಇಲಾಖೆಗೆ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಕಾರವಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ತಂಡ ಮತ್ತು ಭಟ್ಕಳ ಕಂದಾಯ ಇಲಾಖೆಯ ತಂಡ ದಾಳಿ ನಡೆಸಿದೆ….

Read More

ಮನೆ ಮದ್ದು

ಎರಡು ದೊಡ್ಡ ಪತ್ರೆ ಎಲೆ, 5-6 ತುಳಸಿ ಎಲೆಗಳನ್ನು ಉಗಿಯಲ್ಲಿ ಬೇಯಿಸಿ ರಸ ತೆಗೆದು ಎರಡು ಚಿಟಿಕೆ ಹಿಪ್ಪಲಿ ಪುಡಿ ಮತ್ತು ಒಂದು ಚಮಚ ಜೇನುತುಪ್ಪ ಸೇರಿಸಿ ದಿನಕ್ಕೆರಡು ಬಾರಿ ಆಹಾರದ ಮೊದಲು ಸೇವಿಸುವುದರಿಂದ ಬಹುತೇಕ ಕಫ, ನೆಗಡಿ, ಕೆಮ್ಮುಗಳ ನಿವಾರಣೆಯಾಗುತ್ತದೆ.

Read More

ಸರ್ಕಾರಿ ನೌಕರರ ‘ಸಾರ್ವತ್ರಿಕ ವರ್ಗಾವಣೆ’ಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್

ಬೆಂಗಳೂರು : ಕೊರೊನಾ ಕಾಲದಿಂದ ನೆನೆಗುದಿಗೆ ಬಿದ್ದಿದ್ದಂತ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗೆ, ಮುಹೂರ್ತ ಫಿಕ್ಸ್ ಆಗಿದೆ. ದಿನಾಂಕ 22-07-2021ರೊಳಗೆ 2021-22ನೇ ಸಾಲಿಗೆ ಗ್ರೂಪ್-ಬಿ ಮತ್ತು ಗ್ರೂಪ್-ಸಿ ವರ್ಗದ ಅಧಿಕಾರಿ, ನೌಕರ ಸಾರ್ವತ್ರಿಕ ವರ್ಗಾವಣೆ ಮುಕ್ತಾಯಗೊಳಿಸುವಂತೆ ಸರ್ಕಾರ ಆದೇಶಿಸಿದೆ. ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ  ತೇಜಾವತಿ ಎನ್ ನಡವಳಿ ಹೊರಡಿಸಿದ್ದು, ಸರ್ಕಾರಿ ನೌಕರರ ವರ್ಗಾವಣೆ ಕುರಿತಂತೆ ವಿಸ್ತೃತವಾದ ಮಾರ್ಗಸೂಚಿಗಳನ್ನು ನೀಡಲಾಗಿದೆ. ಈ ಮಾರ್ಗಸೂಚಿಗಳ ಪ್ರಕಾರ ಸರ್ಕಾರಿ ನೌಕರರ ವರ್ಗಾವಣೆಗಳನ್ನು…

Read More