2-3 ವಾರದಲ್ಲಿ ಬರುವ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಪೂರ್ವ ಸಿದ್ದತೆ ಮಾಡಿಕೊಳ್ಳಲಾಗುವುದು : ಪ್ರಿಯಾಂಗಾ

ಮುಂಡಗೋಡ: ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸುವ ಬಗ್ಗೆ ಶಿಕ್ಷಣ ಸಚಿವರ ವಿಡಿಯೋ ಕಾನ್ಪರೇನ್ಸನಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಗ ಭಾಗವಹಿಸಿ ನಂತರ ಪತ್ರಕರ್ತರ ಜೊತೆ ಮಾತನಾಡುತ್ತಾ, 2-3ವಾರಗಳಲ್ಲಿ ಬರುವ ಎಸ್‍.ಎಸ್‍.ಎಲ್‍.ಸಿ. ಪರೀಕ್ಷೆಯ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗುವುದು. ಶಿರಸಿ ಹಾಗೂ ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 128 ಕೇಂದ್ರಗಳಲ್ಲಿ ಸುಮಾರು ಇಪ್ಪತ್ತು ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಎಲ್ಲ ಪರೀಕ್ಷಾ ಕೇಂದ್ರಗಳನ್ನು ಜಿಲ್ಲಾಡಳಿತದಿಂದ ತಯಾರು ಮಾಡಲಾಗುತ್ತಿದೆ. ಹಾಸ್ಟೇಲ್‍ನಲ್ಲಿರುವ ವಿದ್ಯಾರ್ಥಿಗಳಿಗೆ ವ್ಯವಸ್ಥೆ ಮಾಡಲಾಗುವುದು ಹಾಗೂ ಪರೀಕ್ಷೆಗೆ ಬರುವ ಶಿಕ್ಷಕರಿಗೆ ಆರ್‍ಟಿಪಿಸಿಆರ್ ಪರೀಕ್ಷೆ…

Read More

ನ್ಯಾಸರ್ಗಿ ಅಂಗನವಾಡಿ ಕೇಂದ್ರವನ್ನು ಮಾದರಿ ಅಂಗನವಾಡಿ ಕೇಂದ್ರವನ್ನಾಗಿ ಮಾಡಲು ನಿರ್ಧಾರ

ಮುಂಡಗೋಡ : ಹೋಬಳಿ ಮಟ್ಟದಲ್ಲಿ ಒಂದೊಂದು ಅಂಗನವಾಡಿಗಳನ್ನು ಮಾದರಿ ಅಂಗನವಾಡಿಯನ್ನಾಗಿ ಮಾಡಲು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮುಂದಾಗಿದ್ದು  ಅದರಂತೆ ಮುಂಡಗೋಡ ತಾಲೂಕಿನ  ನ್ಯಾಸರ್ಗಿ ಅಂಗನವಾಡಿ ಕೆಂದ್ರವನ್ನು ಮಾದರಿ ಅಂಗನವಾಡಿ ಕೇಂದ್ರ ಮಾಡಲು ನಿರ್ಧರಿಸಿದ್ದಾರೆ.    ನ್ಯಾಸರ್ಗಿ ಅಂಗನವಾಡಿ ಕೇಂದ್ರ ಈಗಾಗಲೆ ಮಾದರಿ ಅಂಗನವಾಡಿಯಾಗಿದ್ದು  ಅಂಗನವಾಡಿ ಕೇಂದ್ರದ ಒಳಗೆ ಹೋದರೆ ಮಕ್ಕಳ ಕಲಿಕೆಗೆ ಬೇಕಾಗುವ ಪೂರಕ ವಾತಾವರಣ ಹೊಂದಿದ್ದು ಆಟ ಹಾಗೂ ಪಾಠಗಳಿಗೆ ಅಗತ್ಯವಾಗಿ ಬೇಕಾಗಿರುವ ಎಲ್ಲ ಪರಿಕರಗಳು ಈ ಅಂಗನವಾಡಿಯಲ್ಲಿವೆ. ಅಂಗನವಾಡಿ ಸುತ್ತಮುತ್ತಲು ಹೂವಿನ ಗಿಡಗಳು…

Read More

ಮಹಾರಾಷ್ಟ್ರ, ಕೇರಳಗಳಿಂದ ರಾಜ್ಯಕ್ಕೆ ಬರುವವರಿಗೆ ನೆಗೆಟಿವ್ ವರದಿ ಕಡ್ಡಾಯ : ಸಚಿವ ಡಾ.ಸುಧಾಕರ

ಬೆಂಗಳೂರು : ಮಹಾರಾಷ್ಟ್ರ ಮತ್ತು ಕೇರಳಗಳಿಂದ ರಾಜ್ಯಕ್ಕೆ ಬರುವವರು ಕೊರೊನಾ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.   ಡೆಲ್ಟಾ+ ಹೆಚ್ಚಿರುವ ಮಹಾರಾಷ್ಟ್ರ ಕೇರಳಗಳಿಂದ ರಾಜ್ಯಕ್ಕೆ ಬರುವವರ ಮೇಲೆ ಇರಿಸಲಾಗುತ್ತದೆ. ಗಡಿ ಭಾಗದಲ್ಲಿ ಹೆಚ್ಚಿನ ನಿಗಾವಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.    ಹತ್ತು ವರ್ಷದೊಳಗಿನ ಮಕ್ಕಳ ಹೆತ್ತವರಿಗೆ ಆದ್ಯತೆಯಲ್ಲಿ ಲಸಿಕೆ ನೀಡಲಾಗುವುದು. ವೈದ್ಯ ವಿದ್ಯಾರ್ಥಿಗಳು, ಆರೋಗ್ಯ ಸಿಬ್ಬಂದಿ, ಪೊಲೀಸರ ಕುಟುಂಬದವರು, ಮಾಧ್ಯಮದವರಿಗೂ ಆದ್ಯತೆ ನೀಡಲಾಗುವುದು ಎಂದರು.

Read More

ವಾಣಿಜ್ಯ ಬಂದರು ನಿರ್ಮಾಣ : ಮೀನುಗಾರರ ಮುಖಂಡರೊಂದಿಗೆ ಸಚಿವ ಹೆಬ್ಬಾರ ಸಭೆ

ಯಲ್ಲಾಪುರ : ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕದಲ್ಲಿ ಹೊನ್ನಾವರ ಪೋರ್ಟ ಪ್ರೈವೇಟ್ ಲಿಮಿಟೆಡ್ ಸಹಭಾಗಿತ್ವದಲ್ಲಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಸಂಬಂಧಿಸಿದಂತೆ ಇಂದು ಯಲ್ಲಾಪುರ ಪಟ್ಟಣದ ಅರಣ್ಯ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಮಾನ್ಯ ಕಾರ್ಮಿಕ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರ್ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲಾ  ಹಾಗೂ ಸ್ಥಳೀಯ ಮೀನುಗಾರ ಮುಖಂಡರೊಂದಿಗೆ ಸಭೆ ನಡೆಸಿದರು.    ಬಂದರು ನಿರ್ಮಾಣದ ಸಾಧಕ ಬಾದಕಗಳ ಬಗ್ಗೆ ಕುರಿತು ಸ್ಥಳೀಯ ಮುಖಂಡರೊಂದಿಗೆ ವಿಸ್ತೃತವಾಗಿ ಚರ್ಚಿಸಿದರು,…

Read More

30 ವರ್ಷಗಳ ಹಿಂದೆ ಮುಳುಗಡೆಯಾಗಿದ್ದ ಹಡಗಿನ ಅವಶೇಷ ಪತ್ತೆ

ಕಾರವಾರ : ಸುಮಾರು 30 ವರ್ಷಗಳ ಹಿಂದೆ ಕಾರವಾರದ ಸಮುದ್ರ ಭಾಗದಲ್ಲಿ ಮುಳುಗಡೆಯಾಗಿದ್ದ ಸಿಂಗಾಪುರ ದೇಶದ ಚೆರಿಮಾಜು ಎಂಬ ಹೆಸರಿನ ಸರಕು ಸಾಗಾಣಿಕೆ ಹಡಗಿನ ಅವಶೇಷಗಳು ಇಂದು ಕಾರವಾರದ ಕಡಲ ತೀರದಲ್ಲಿ ಪತ್ತೆಯಾಗಿದೆ.

Read More

ಹೆಬ್ಬಾರ ರೇಶನ್ ಕಿಟ್ ವಿತರಣೆಗೆ ಸಿದ್ದತೆ

ಮುಂಡಗೋಡ: ಯಲ್ಲಾಪುರ ವಿಧಾನ ಸಭಾ ಕ್ಷೇತ್ರದ ಬಡ ಕುಟುಂಬಗಳಿಗೆ ಹೆಬ್ಬಾರ ರೇಷನ್ ಕಿಟ್ ವಿತರಣೆ ಮಾಡಲು ಸಕಲ ಸಿದ್ಧತೆ ನಡೆಸಲಾಗಿದೆ. ಕೋವಿಡ್ ಸಂದರ್ಭದಲ್ಲಿ ಬಡ ಜನರು ಸಾಕಷ್ಟು ತೊಂದರೆ ಅನುಭವಿಸಿದ್ದು ಇದರಿಂದ ಕ್ಷೇತ್ರದ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಸಚಿವ ಶಿವರಾಮ ಹೆಬ್ಬಾರ ಅವರು ಯಲ್ಲಾಪುರ ವಿಧಾನ ಸಭಾ ಕ್ಷೇತ್ರದ 63ಸಾವಿರ ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ ಹೆಬ್ಬಾರ ರೇಷನ್ ಕೀಟ್‍ನ್ನು ಸಚಿವ ಹೆಬ್ಬಾರ ಅವರ ಕುಟುಂಬದ ವತಿಯಿಂದ ಜನರಿಗೆ ಸದ್ಯದಲ್ಲಿಯೆ ವಿತರಿಸಲಾಗುವುದು. ಪಡಿತರ ಚೀಟಿ…

Read More

ಬಾಡಿಗೆದಾರರಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಮುಂಡಗೋಡ: ಪಟ್ಟಣ ಪಂಚಾಯತ ವಾಣಿಜ್ಯ ಮಳಿಗೆಗಳ ಮೂರು ತಿಂಗಳ ಬಾಡಿಗೆ ಹಣವನ್ನು ವಿನಾಯತಿ ನೀಡುವಂತೆ ವಾಣಿಜ್ಯ ಮಳಿಗೆ ಬಾಡಿಗೆದಾರರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ನಾವುಗಳು ಪಟ್ಟಣ ಪಂಚಾಯತಕ್ಕೆ ಸೇರಿದ ವಾಣಿಜ್ಯ ಮಳಿಗೆಗಳನ್ನು ಬಾಡಿಗೆ ಪಡೆದುಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದು, ಆದರೆ ಕೋವಿಡ್ ಎರಡನೆ ಅಲೆ ಆರಂಭವಾದ ನಂತರ ನಾವು ನಮ್ಮ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡಿಕೊಂಡು ಮನೆಯಲ್ಲಿ ಉಳಿದುಕೊಂಡಿದ್ದೆವು. ಇದೀಗ ಲಾಕ್‍ಡೌನ್ ತೆರವುಗೊಳಿಸಿದ ಪರಿಣಾಮ ನಮ್ಮ ಅಂಗಡಿಗಳನ್ನು ಆರಂಭಿಸಿದ್ದೇವೆ. ಆದರೆ ಸರಿಯಾದ ವ್ಯಾಪಾರ ನಡೆಯುತ್ತಿಲ್ಲ. ಆದ್ದರಿಂದ ವಾಣಿಜ್ಯ…

Read More