ಮೈದುಂಬಿದ ಧರ್ಮಾ ಜಲಾಶಯ
ಮುಂಡಗೋಡ : ತಾಲೂಕಿನ ಧರ್ಮಾ ಜಲಾಶಯ ಭರ್ತಿಯಾಗಿದೆ. ಮುಂಡಗೋಡ ತಾಲೂಕಿನಲ್ಲಿ ಯಮಗಳ್ಳಿ ಹಳ್ಳಿ ಬಳಿ 1964ರಲ್ಲಿ ನಿರ್ಮಿಸಲಾಗಿರುವ ಆಣೆಕಟ್ಟು ರೈತರ ಹೊಲಗಳಿಗೆ ನೀರಾವರಿ ಸೌಲಭ್ಯ ಒದಗಿಸಿದೆ. ಧರ್ಮಾ ಜಲಾಶಯ ಮುಂಡಗೋಡ ತಾಲೂಕಿನಲ್ಲಿದ್ದರೂ ಇದರ ಸಂಪೂರ್ಣ ಪ್ರಯೋಜನ ಹಾನಗಲ್ ತಾಲೂಕಿನ ರೈತರಿಗಾಗುತ್ತಿದೆ. ಮುಂಡಗೋಡ ತಾಲೂಕಿನ ನೂರಾರು ಏಕರೆ ಜಮೀನುಗಳಿಗಷ್ಟೇ ಈ ಜಲಾಶಯದ ನೀರು ಪೂರೈಕೆಯಾಗುತ್ತಿದ್ದು, ಹಾನಗಲ್ ತಾಲೂಕಿನ ಸಾವಿರಾರು ಏಕರೆ ಪ್ರದೇಶದ ಜಮೀನುಗಳಿಗೆ ಇದು ನೀರಾವರಿ ಸೌಲಭ್ಯ ಒದಗಿಸಿದೆ. ಈ ಜಲಾಶಯ ತುಂಬಿ ಹರಿಯುವ ಜೊತೆಗೆ ಇದರ ಕೆಳಗಿನ…