Home
ಬಕ್ರೀದ್ ಆಚರಣೆ
ಮುಂಡಗೋಡ : ತ್ಯಾಗ, ಬಲಿದಾನದ ಸಂಕೇತವಾದ ಪವಿತ್ರ ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಮುಸ್ಲೀಮ ಬಾಂಧವರು ಇಂದು ಆಚರಿಸಿದರು. ಮಸೀದಿಯಲ್ಲಿ ಎಲ್ಲರೂ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ನಂತರ ಪರಸ್ಪರ ಹಬ್ಬದ ಶುಭಾಶಯ ಕೋರಿದರು.
ಪದಗ್ರಹಣ ಸಮಾರಂಭ
ಮುಂಡಗೋಡ : ಟ್ರಿನಿಟಿ ಹಾಲನಲ್ಲಿ ರೋಟರಿ ಕ್ಲಬ್ ಮುಂಡಗೋಡದ 2021-22ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು. ನೂತನ ಅಧ್ಯಕ್ಷರಾಗಿ ಶಾಜಿ ಥಾಮಸ್, ಕಾರ್ಯದರ್ಶಿಯಾಗಿ ಬೈಜು ವಿ.ಜೆ. ಹಾಗೂ ಖಜಾಂಚಿಯಾಗಿ ವಸಂತ ಕೊಣಸಾಲಿ ಅಧಿಕಾರ ಸ್ವೀಕರಿಸಿದರು. ಪದಗ್ರಹಣ ಸಮಾರಂಭವನ್ನು ಶಿರಸಿ ರೋಟರಿ ಕ್ಲಬ್ಬಿನ ಪ್ರವೀಣ ಕಾಮತ್ ನಡೆಸಿಕೊಟ್ಟರು. ನಂತರ ಅವರು ಮಾತನಾಡುತ್ತಾ, ರೋಟರಿ ಅಂದರೆ ಸೇವೆ. ಸೇವೆ ಮತ್ತೊಂದು ಹೆಸರು ರೋಟರಿ ಎಂದರು. ಶಿರಸಿ ವಲಯದ ರೋಟರಿ ಉಪ ಪ್ರಾಂತಪಾಲರಾದ ಡಾ.ಕೆ.ವಿ.ಶಿವರಾಮ ಉಪಸ್ಥಿತರಿದ್ದರು. ರೋಟರಿ ಕ್ಲಬ್ಬಿನ ನಿತನ…
ಬೇಲಿಗೆ ಹಾಕಿದ ಬಲೆಯಲ್ಲಿ ಸಿಕ್ಕಿಕೊಂಡಿದ್ದ ಜಿಂಕೆಯ ರಕ್ಷಣೆ
ಮುಂಡಗೋಡ : ಆಹಾರ ಅರಸುತ್ತಾ ಬಂದ ಜಿಂಕೆಯೊಂದು ಗದ್ದೆಯ ಬೇಲಿಗೆ ಹಾಕಿದ್ದ ಬಲೆಯಲ್ಲಿ ಸಿಲುಕಿಕೊಂಡಿದ್ದನ್ನು ಅರಣ್ಯ ಇಲಾಖೆಯವರು ರಕ್ಷಣೆ ಮಾಡಿ ಅರಣ್ಯಕ್ಕೆ ಬಿಟ್ಟ ಘಟನೆ ತಾಲೂಕಿನ ಅಜ್ಜಳ್ಳಿ ಗ್ರಾಮದ ಬಳಿ ಜರುಗಿದೆ. ಅಜ್ಜಳ್ಳಿ ಗ್ರಾಮದ ಹೊರವಲಯದಲ್ಲಿ ಗೋವಿನಜೋಳದ ಹೊಲದಲ್ಲಿ ಆಹಾರ ಅರಸಿ ಬಂದ ಜಿಂಕೆಯೊಂದು ಗದ್ದೆಯ ಬೇಲಿಗೆ ಹಾಕಿದ್ದ ಬಲೆಯಲ್ಲಿ ಸಿಲುಕಿಕೊಂಡಿತು. ಬಲೆಯಲ್ಲಿ ಸಿಲುಕಿಕೊಂಡ ಜಿಂಕೆಯು ತನ್ನ ಕೋಡನ್ನು ಬಲೆಯಿಂದ ತೆಗೆಯಲಾಗದೇ ಪರದಾಡಿದೆ. ಈ ವೇಳೆ ಜಿಂಕೆಯ ಕೂಗಾಟ ಕೇಳಿದ ರೈತರು ಬಂದು ನೋಡಿದಾಗ ಬಲೆಯಲ್ಲಿ ಜಿಂಕೆಯ…
ಗೋಕರ್ಣ ಪರ್ತಗಾಳಿ ಶ್ರೀಗಳು ವಿಧಿವಶ
ಕಾರವಾರ : ಶ್ರೀಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಪರಮಪೂಜ್ಯ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಮಹಾಸ್ವಾಮಿಗಳು ಇಂದು ವಿಧಿವಶರಾಗಿದ್ದಾರೆ. ಅಗಸ್ಟ 3,1945ರಲ್ಲಿ ಜನಿಸಿದ ಶ್ರೀಗಳು 26 ಫೆಬ್ರವರಿ 1967ರಲ್ಲಿ ಶ್ರೀಗೋಕರ್ಣ ಪರ್ತಗಾಳಿ ಮಠದ 23ನೇ ಮಠಾಧಿಪತಿಗಳಾಗಿ ಆಶ್ರಮ ಸ್ವೀಕರಿಸಿದ್ದರು. ಸಮಾಜದ ಒಳಿತಿಗಾಗಿ,ಸನಾತನ ಹಿಂದು ಧರ್ಮದ ರಕ್ಷಣೆ ಹಾಗೂ ಯುವ ಪೀಳಿಗೆಯಲ್ಲಿ ಹಿಂದೂ ಧರ್ಮದ ಜಾಗೃತೆಗಾಗಿ ಹಲವಾರು ದಶಕಗಳ ಕಾಲ ಶ್ರಮಿಸಿದ ಪೂಜ್ಯರು ಜಾತಿ, ಧರ್ಮ, ಮತ ಭೇದ ಮಾಡದೇ ನೊಂದು ಬಂದ ಭಕ್ತಾದಿಗಳ ಸಂಕಷ್ಟಗಳನ್ನು…