Home
ಸೆಲ್ಫೀ ನೋಡಿ ಮಾಜಿ ಪ್ರೇಯಸಿ ಹತ್ಯೆಗೆ ಬಂದವನ ಬಂಧನ
ಕಾರವಾರ : ಆಕೆಯ ಒಂದೇ ಒಂದು ಸೆಲ್ಫಿ ಸಾವಿನತ್ತ ಕರೆದುಕೊಂಡು ಹೋಗಿತ್ತು….. ನಿಜ, ಪ್ರೀತಿಸಿ ಕೈಕೊಟ್ಟ ಹುಡುಗಿ ಫೋಟೋ ನೋಡಿ ಕೊಲ್ಲಲು ಕುಡ್ಲೆ ಬೀಚ್‌ಗೆ ಬಂದಿದ್ದ ಮಾಜಿ ಪ್ರೇಮಿ, ಮಾಜಿ ಪ್ರಿಯತಮೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದ. ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಾಜಿ ಪ್ರೇಯಸಿಯನ್ನು ಹಿಂಬಾಲಿಸಿಕೊಂಡು ಬಂದು ಕೊಲೆಗೆ ಯತ್ನಿಸಿ,ಪರಾರಿಯಾಗಿ ವೇಷ ಬದಲಾಯಿಸಿಕೊಂಡಿದ್ದ ಆರೋಪಿಯನ್ನು ಪುಣೆಯಲ್ಲಿ ಬಂಧಿಸುವಲ್ಲಿ ಗೋಕರ್ಣ ಪೊಲೀಸರು ಯಶಸ್ವಿಯಾಗಿದ್ದಾರೆ. ಜುಲೈ 7 ರಂದು ಗೋಕರ್ಣದ ಕುಡ್ಲೆ ಬೀಚ್‌ಗೆ ಸ್ನೇಹಿತರ ಜೊತೆ ಬಂದಿದ್ದ…
ಹನಿಗವನಗಳು-2
ಹ(ಣ)ಗರಣ ಇದ್ದರೆ ಕೈ ತುಂಬ ಹಣ ಮುಚ್ಚಿಹಾಕಬಹುದು ಸುಲಭವಾಗಿ, ಮಾಡಿದ ಹಗರಣ.! ಅಂದು –ಇಂದು ಅಂದಿನ ಕವಿಗಳ ಕವನಗಳಲ್ಲಿ ಕಾಣುತ್ತಿತ್ತು ಮಣ್ಣಿನವಾಸನೆ, ಇಂದಿನ ಕವಿಗಳ ಕವನಗಳಲ್ಲಿ? ಕಾಣುತ್ತಿದೆ ಬರೀ ಹೆಣ್ಣಿನ ವಾಸನೆ!. ~ ಶಿವಪ್ರಸಾದ್ ಹಾದಿಮನಿ, ಕೊಪ್ಪಳ
17 ಚಾಕಪೀಸನಲ್ಲಿ ರಾಷ್ಟ್ರ ಗೀತೆ, ಏಷಿಯಾ ಬುಕ್ ಆಫ್ ರೆಕಾರ್ಡ್ಸಗೆ ದಾಖಲೆಯಾದ ಪ್ರದೀಪ ನಾಯ್ಕ
ಹೊನ್ನಾವರ : ತಾಲೂಕಿನ ಗೇರುಸೊಪ್ಪಾ ಗ್ರಾಮದ ಪ್ರದೀಪ್ ಮಂಜುನಾಥ ನಾಯ್ಕ ಅವರು ವಿಶೇಷವಾದ ಕಲೆಯಲ್ಲಿ ಪರಿಣತಿ ಪಡೆದಿದ್ದಾರೆ. ಹೊನ್ನಾವರದ ಎಸ್.ಡಿ.ಎಮ್. ಕಾಲೇಜಿನಲ್ಲಿ ಪದವಿ ಪೂರೈಸಿರುವ ಇವರು ಪ್ರಸ್ತುತ ಬಿ.ಎಡ್.ಶಿಕ್ಷಣವನ್ನು ಕಾರವಾರದ ಶಿವಾಜಿ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಪ್ರದೀಪ್ ಅವರಿಗೆ ಚಾಕ್ ಆರ್ಟ್ ಎಂದರೆ ಏನೋ ಸಂತಸ. ಹಾಗೆ ಅದನ್ನು ಮಾಡಬೇಕೆಂಬ ಹಂಬಲದಿಂದ ಕೆಲವು ವರ್ಷಗಳಿಂದ ಈ ಹವ್ಯಾಸ ಶುರುವಾಗಿದೆ. ಮೊದ ಮೊದಲು ಇಂಗ್ಲಿಷ್ ನ ಅಕ್ಷರ ಕೆತ್ತುವ ಅಭ್ಯಾಸ ಮಾಡುತ್ತಾ ಹಾಗೆ ಕೆಲ ದಿನಗಳ ನಂತರ ತನ್ನ…
ಬೆಡಸಗಾಂವ ಬಳಿ ಹುಲಿ ತಿರುಗಾಟ
ಮುಂಡಗೋಡ : ತಾಲೂಕಿನ ಬೆಡಸಗಾಂವ ಊರ ಬಳಿಯೇ ಹುಲಿ ತಿರುಗಾಟ ನಡೆಸಿದೆ. ಹುಲಿಯು ಗ್ರಾಮದ ಬಳಿಯೇ ತಿರುಗಾಡುತ್ತಿರುವ ಬಗ್ಗೆ ಕೆಲವರು ಭಯಭೀತರಾದರೆ ಮತ್ತೆ ಕೆಲವರು ಇದು ಈ ಭಾಗದಲ್ಲಿ `ಕಾಮನ್’ ಎನ್ನುತ್ತಿದ್ದಾರೆ. ಬೆಡಸಗಾಂವ ಗ್ರಾಮಕ್ಕೆ ಹೋಗುವ ದಾರಿ ದಟ್ಟ ಅರಣ್ಯದಿಂದ ಕೂಡಿದ್ದು, ಜನರು ಸೈಕಲ್, ಬೈಕ್ ಮೇಲೆ ಇನ್ನು ಕೆಲವರು ನಡೆದುಕೊಂಡು ಹೋಗುತ್ತಾರೆ. ಆದ್ದರಿಂದ ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.
ಕಾತೂರ ಶಾಲೆಯಲ್ಲಿ ವನಮಹೋತ್ಸವ : ಸಸಿ ನೆಟ್ಟ ಎಂ.ಎಲ್.ಸಿ.
ಮುಂಡಗೋಡ : ತಾಲೂಕಿನ ಕಾತೂರ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಇಂದು ವನಮಹೋತ್ಸವ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಎಂ.ಎಲ್.ಸಿ. ಶಾಂತಾರಾಮ ಸಿದ್ದಿ ಅವರು ಸಸಿ ನೆಟ್ಟರು. ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಪ್ರಕಾಶ ಅಜ್ಜಮ್ಮನವರ್, ಕಾತೂರ ಗ್ರಾ.ಪಂ.ಅಧ್ಯಕ್ಷೆ ರೇಣುಕಾ ಮಾಯಣ್ಣವರ್, ನಾಗನೂರ ಗ್ರಾ.ಪಂ. ಅಧ್ಯಕ್ಷ ಸುನೀಲ ಶಳಕೆ, ಕಾತೂರ ಸೊಸೈಟಿ ಅಧ್ಯಕ್ಷ ಶಿವಾಜಿ ಸಿಂಧೆ, ಉಪವಲಯ ಅರಣ್ಯಾಧಿಕಾರಿ ನಾಗರಾಜ ಕಲಾಲ ಮುಂತಾದವರಿದ್ದರು.
ಅಂಗನವಾಡಿ ಕಾರ್ಯಕರ್ತೆಯರಿಂದ ಮನವಿ
ಮುಂಡಗೋಡ : ಅಖಿಲ ಭಾರತ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಫೆಡರೇಶನ್ ಕರೆ ಮೇರೆಗೆ ಇಂದು ಮುಂಡಗೋಡ ತಾಲೂಕ ಅಂಗನವಾಡಿ ಕಾರ್ಯಕರ್ತೆಯರು ತಹಶೀಲದಾರ ಮೂಲಕ ಪ್ರಧಾನಮಂತ್ರಿಗಳಿಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮನವಿ ಅರ್ಪಿಸಿದರು. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸುರಕ್ಷತಾ ಗೇರ್, ಅಪಾಯ ಭತ್ಯೆ ಮತ್ತು ವಿಮಾ ರಕ್ಷಣೆ ನೀಡಬೇಕು. ಅಂಗನವಾಡಿ ಕಾರ್ಯಕರ್ತ ಮತ್ತು ಸಹಾಯಕಿಯರನ್ನು ಕಾಯಂಗೊಳಿಸಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತಾ…
ಅಣ್ಣನಿಂದ ತಮ್ಮನ ಬರ್ಬರ ಹತ್ಯೆ
ಹೊನ್ನಾವರ : ಅಣ್ಣ ತಮ್ಮಂದಿರ ಜಗಳದಲ್ಲಿ ತಮ್ಮನ ತಲೆಗೆ ಕತ್ತಿಯಿಂದ ಬಲವಾಗಿ ಹೊಡೆದು ಅಣ್ಣ ಕೊಲೆ ಮಾಡಿರುವ ಘಟನೆ ತಡರಾತ್ರಿ ಹೊನ್ನಾವರದಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿ ಅರ್ಜುನ್ ಶಂಕರ ಮೇಸ್ತ (23) ಎಂದು ಗುರುತಿಸಲಾಗಿದೆ. ಹೊನ್ನಾವರ ಪಟ್ಟಣದಿಂದ ತಾರೀಬಾಗಿಲಿಗೆ ಹೋಗುವ ಚರ್ಚ್ ರಸ್ತೆಯಲ್ಲಿರುವ ಮನೆಯೊಂದರಲ್ಲಿ 23 ವರ್ಷದ ಅರ್ಜುನ್ ಮೇಸ್ತ ಎಂಬ ಯುವಕನ ತಲೆಗೆ ಕತ್ತಿಯಿಂದ ಭೀಕರವಾಗಿ ಹೊಡೆದು,ಕೋಣೆಯೊಂದರಲ್ಲಿ ಕೂಡಿ ಹಾಕಿ ಅಣ್ಣ ಪರಾರಿಯಾಗಿದ್ದ ಎನ್ನಲಾಗಿದೆ. ತಾಯಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ಈ ಘಟನೆ ನಡೆದಿದ್ದು,ಮನೆಯ ಅಕ್ಕ ಪಕ್ಕದ…