ಕಬ್ಬಿನ ಹೊಲಕ್ಕೆ ಹಾಕಿದ್ದ ವಿದ್ಯುತ್ ತಂತಿ ತಾಗಿ ವ್ಯಕ್ತಿ ಸಾವು
ಮುಂಡಗೋಡ : ಕಬ್ಬಿನ ಹೊಲಕ್ಕೆ ಅಳವಡಿಸಿದ ವಿದ್ಯುತ್ ತಂತಿ ತಾಗಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆಯೊಂದು ತಾಲೂಕಿನ ಉಗ್ಗಿನಕೇರಿಯಲ್ಲಿ ಕಳೆದ ರಾತ್ರಿ ನಡೆದಿದೆ. ತಾಲೂಕಿನ ಉಗ್ಗಿನಕೇರಿ ಗ್ರಾಮದ ಪ್ರದೀಪ ಜೂಜೆ ಸಿದ್ದಿ(34) ಎಂಬಾತನೇ ವಿದ್ಯುತ್ ತಂತಿ ತಾಗಿ ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಪರಶುರಾಮ ಪುರದವರ್ ಇವರು ತಮ್ಮ ಕಬ್ಬಿನ ಹೊಲದ ಬೇಲಿಗೆ ವಿದ್ಯುತ್ ಹರಿಸಿದ್ದಲ್ಲಿ ಪ್ರಾಣಿಗಳು ಹಾಗೂ ಮನುಷ್ಯರು ಬೇಲಿಯನ್ನು ಮುಟ್ಟಿದರೆ ಪ್ರಾಣಾಪಾಯ ಆಗುತ್ತದೆ ಎನ್ನುವ ಬಗ್ಗೆ ತಿಳಿದಿದ್ದರೂ ಸಹ ನಿರ್ಲಕ್ಷ್ಯತನದಿಂದ ತಮ್ಮ ಕಬ್ಬಿನ ಹೊಲಕ್ಕೆ ಅಳವಡಿಸಿದ ತಂತಿಗೆ ಬೋರಿನ…