ನಾಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ದೆಹಲಿಗೆ : ಹೈಕಮಾಂಡ್‌ ಭೇಟಿ

Spread the love

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ನಾಳೆ ದೆಹಲಿಗೆ ಪ್ರಯಾಣ ಬೆಳಸಲಿದ್ದು, ಹೈಕಮಾಂಡ್‌ ಭೇಟಿಯಾಗಲಿದ್ದಾರೆ.

ನಾಳೆ ಬೆಳಗ್ಗೆ 11 ಗಂಟೆಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಹೋಗಲಿರುವ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ನಾಳೆ ಹೈಕಮಾಂಡ್‌ ಭೇಟಿಯಾಗಿ ವಿಧಾನಪರಿಷತ್‌ ಚುನಾವಣೆ ಕುರಿತು ಚರ್ಚೆ ನಡೆಸಲಿದ್ದಾರೆ.
ವಿಧಾನಪರಿಷತ್‌ ಚುನಾವಣೆಗೆ ಚರ್ಚೆ ನಡೆಸಲು ಸಿಎಂ, ಡಿಸಿಎಂ ದೆಹಲಿಗೆ ತೆರಳುತ್ತಿದ್ದು, ಏಳು ಪರಿಷತ್‌ ಸ್ಥಾನಗಳಿಗೆ 70 ಆಕಾಂಕ್ಷಿಗಳಿದ್ದು, ಇದುವರೆಗೆ ಯಾವುದೇ ಸ್ಥಾನಗಳಿಗೆ ಆಯ್ಕೆ ಮಾಡಿಲ್ಲ. ಹೀಗಾಗಿ ಈ ಬಗ್ಗೆ ಚರ್ಚೆ ನಡೆಸಲು ದೆಹಲಿಗೆ ಹೋಗಲಿದ್ದಾರೆ.