ರಾಹುಲ್ ಗಾಂಧಿಯ & ಕಾಂಗ್ರೆಸ್ ಪಕ್ಷದ ಬ್ಯಾಟರಿ ಡೌನ್ ಆಗಿದೆ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯ

Spread the love

ಹುಬ್ಬಳ್ಳಿ : 2022 ರಲ್ಲಿ ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಂತಹ ಗಲಭೆ ಪ್ರಕರಣವನ್ನು ನಿನ್ನೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ಹಿಂಪಡೆದ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿಯವರ ಬ್ಯಾಟರಿ ಡೌನ್ ಆಗಿದೆ ಎಂದು ವ್ಯಂಗ್ಯವಾಡಿದರು.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪರ ಜೀವಿ ಪಕ್ಷ. ಬೇರೆಯವರ ಬಲದ ಮೇಲೆ ಕಾಂಗ್ರೆಸ್ನವರು ಬದುಕುತ್ತಾರೆ. ಕಾಂಗ್ರೆಸ್ ಕುರುಡು ಪಾರ್ಟಿ ಆಗಿದೆ. ಮುಂದೆ ಹೋಗಬೇಕಾದರೆ ಬೇರೆಯವರು ಹೆಗಲು ಕೊಡಬೇಕಾಗಿದೆ ಹೀಗಾಗಿ ಕಾಂಗ್ರೆಸ್ ಪಕ್ಷದವರಿಗೆ ಕೆಲವರು ಹೆಗಲು ಕೊಡುತ್ತಿದ್ದಾರೆ. ದೇಶದಲ್ಲಿ ಇವಿಎಂ ವ್ಯವಸ್ಥೆ ಬಂದಿರೋದು ಕಾಂಗ್ರೆಸ್ ಆಡಳಿತ. ಸಮಸ್ಯೆ ಆಗಿದೆ ಅಂದ್ರೆ ರಾಹುಲ್ ಗಾಂಧಿ ಬ್ಯಾಟರಿ ಡೌನ್ ಆಗಿದೆ ಅಂತ ಅರ್ಥ ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಬ್ಯಾಟರಿ ಡೌನ್ ಆಗಿದೆ.

ಕಾಂಗ್ರೆಸ್ ಪಾರ್ಟಿ ಬ್ಯಾಟರಿ ಫೇಲ್ ಆಗಿದೆ ಅದು ಚಾರ್ಜ್ ಆಗುತ್ತಿಲ್ಲ. ರಾಹುಲ್ ಗಾಂಧಿ ಬ್ಯಾಟರಿ ಪೂರ್ಣ ಡೆಡ್ ಆಗಿದೆ. ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ೪೩ ಕೇಸ್ ವಾಪಸ್ ಪಡೆದ ನಿರ್ಧಾರ ವಿಚಾರವಾಗಿ, ಸಂಘಟಿತ ಭಯೋತ್ಪಾದಕ ಕೃತ್ಯ ಎಂದು ಎನ್ಐಎ ಅಧಿಕಾರಿಗಳು ಜಾರ್ಜ್ ಶೀಟ್ ಸಲ್ಲಿಸಿದ್ದರು. ಎನ್ಐಎ ದಾಖಲಿಸಿದ್ದ ಕೇಸ್ ಹಿಂಪಡೆದಿದ್ದಾರೆ ಎಂಬ ಮಾಹಿತಿ ಇದೆ.

ಕಾಂಗ್ರೆಸ್ ಭಯೋತ್ಪಾದಕ ಬೆಂಬಲಿತ ಪಾರ್ಟಿ. ಕೇಸ್ಗಳನ್ನು ವಾಪಸ್ ಪಡೆದು ಬಹುದೊಡ್ಡ ಕಂಟಕ ತಂದಿದ್ದಾರೆ. ಕೇಸ್ ವಾಪಸ್ ಪಡೆಯುತ್ತಾರೆ ಅಂದರೆ ಇವರ ಉದ್ದೇಶ ಏನು ಹಾಗಾದರೆ? ದೇಶದಲ್ಲಿ 95% ನಕ್ಸಲ್ ಚಟುವಟಿಕೆ ಕಡಿಮೆ ಆಗಿದೆ. ಕೇಂದ್ರ ಸರ್ಕಾರದ ಕ್ರಮದಿಂದ ನಕ್ಸಲ ಚಟುವಟಿಕೆ ಕಡಿಮೆ ಆಗಿದೆ. ಉಗ್ರ ಕೃತ್ಯಕ್ಕೆ ಯತ್ನಿಸಿದ್ದವರ ಕೇಸ್ ಹಿಂಪಡೆದಿದ್ದನ್ನು ಖಂಡಿಸುತ್ತೇನೆ. ಭಯೋತ್ಪಾದಕ ಇಸ್ಲಾಂ ಪರ ಕಾಂಗ್ರೆಸ್ ಇದೆ.

ಕೇಸ್ ಹಿಂಪಡೆದಿದ್ದು ನಿಜವಾದರೆ ಕಾನೂನು ಹೋರಾಟ ಮಾಡುತ್ತೇವೆ. ನಾಳೆ ಇಸ್ಲಾಂ ಮತಾಂಧ ಶಕ್ತಿಗಳು ಪೊಲೀಸ್ ಠಾಣೆಯನ್ನು ಸುಟ್ಟುಹಾಕಬಹುದು.ಸರ್ಕಾರದ ನಿರ್ಧಾರವನ್ನು ಖಂಡಿಸಿ ಕೋರ್ಟ್ ಮೊರೆ ಹೋಗುತ್ತೇವೆ ನಾಳೆ ರಾಜ್ಯ ಸರ್ಕಾರ ಮಾಹಿತಿ ನೀಡದಿದ್ದರೆ ಹೋರಾಟ ಮಾಡುತ್ತೇವೆ ನನಗಿರುವ ಮಾಹಿತಿಯ ಪ್ರಕಾರ ಎನ್ಐಎ ಕೆಎಸ್ ಯಾವ ರಾಜ್ಯ ಕೂಡ ಹಿಂಪಡೆದಿಲ್ಲ ಹಿಂದೂ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.