ಪಕ್ಷದ ಶಿಸ್ತು ಉಲ್ಲಂಘಿಸಿದ್ದು ಸಾಬೀತಾದ್ರೆ ಸಚಿವ ಸ್ಥಾನದಿಂದ ವಜಾ ಮಾಡುವಂತೆ ಎಐಸಿಸಿ ಸೂಚನೆ: ಸಿಎಂ

Spread the love

ಬೆಂಗಳೂರು: ಎಐಸಿಸಿ ಅಧ್ಯಕ್ಷರು (AICC President) ಈಗಾಗಲೇ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸಚಿವ ಸುರ್ಜೆವಾಲಾ ಅವರಿಗೆ ಸ್ಪಷ್ಟವಾಗಿ ಸೂಚನೆ ನೀಡಿದ್ದಾರೆ. ಪಕ್ಷದ ಶಿಸ್ತು ಉಲ್ಲಂಗಿಸಿದ್ದು ಸಾಬೀತಾದರೇ ಸಚಿವ ಸ್ಥಾನದಿಂದ ವಜಾ ಮಾಡುವಂತೆ ನೀಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಸಂಪುಟ ಸಭೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿಂದು ನಡೆದ ಕ್ಯಾಬಿನೆಟ್‌ ಸಭೆಯಲ್ಲಿ ಮಾತಮಾಡಿದ ಅವರು, ಸಚಿವರಿಗೆ ಎಚ್ಚರಿಕೆ ಕೊಟ್ಟರು. ನನ್ನ ಮತ್ತು ಶಿವಕುಮಾರ್‌ ಇಬ್ಬರೊಟ್ಟಿಗೂ ಕೆ.ಸಿ ವೇಣುಗೋಪಾಲ್ (KC Venugopal) ಮಾತನಾಡಿದ್ದಾರೆ. ನೀವ್ಯಾರು ಇನ್ನುಮುಂದೆ ಸಭೆ ಸೇರುವುದು, ಮಾತನಾಡುವುದು, ಮಾಡಬಾರದು. ಮುಂದೆ ಅಂತಹ ಪರಿಸ್ಥಿತಿ ನಿರ್ಮಾಣವಾದರೆ ನೀವೆ ಜವಾಬ್ದಾರರು ಎಂದಿದ್ದಾರೆ.