ಕೈಗಾರಿಕಾ ಪ್ರದೇಶದಲ್ಲಿಯೇ ಟೌನ್ ಶಿಪ್ ನಿರ್ಮಾಣಕ್ಕೆ ಚಿಂತನೆ: ಸಚಿವ ನಿರಾಣಿ

Spread the love

ಹುಬ್ಬಳ್ಳಿ: ಕೈಗಾರಿಕಾ ಪ್ರದೇಶದಲ್ಲಿ ವಸತಿ ಸೌಲಭ್ಯ ಕಲ್ಪಸುವ ನಿಟ್ಟಿನಲ್ಲಿ ಒಟ್ಟು ಕೈಗಾರಿಕಾ ಪ್ರದೇಶದ ಶೇಕಡಾ 10 ರಷ್ಟು ಪ್ರದೇಶವನ್ನು ಟೌನ್ ಶಿಪ್ ಮಾಡಲು ಚಿಂತಿಸಲಾಗುತ್ತಿದೆ ಎಂದು, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದರು.

ಇಲ್ಲಿನ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಉದ್ಯಮಿಗಳ ಸಭೆಯಲ್ಲಿ ಮಾತನಾಡಿದ ಅವರು, ಉದ್ಯಮದ ಹತ್ತಿರದಲ್ಲೇ ವಸತಿ ಇದ್ದರೆ ಸಹಕಾರಿ ಆಗಲಿದೆ ಎಂಬ ಉದ್ದೇಶದಿಂದ ಟೌನ್ ಶಿಪ್ ಗೆ ಚಿಂತಿಸಲಾಗುತ್ತದೆಯೇ ವಿನಃ, ಮತ್ಯಾವುದೆ ಉದ್ದೇಶ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

2020-25 ರ ಕೈಗಾರಿಕಾ ನೀತಿಯಲ್ಲಿ ಕೆಲವೊಂದಿಷ್ಟು ಬದಲಾವಣೆ ಜತೆಗೆ ಸರಳೀಕರಣ ಕೈಗೊಳ್ಳಲಾಗುತ್ತಿದೆ. ಕೈಗಾರಿಕಾ ನಿವೇಶನ ಪಡೆದು ಶೇ. 51ರಷ್ಟು ಉದ್ದೇಶಿತ ಕಟ್ಟಡ ನಿರ್ಮಾಣ ಮಾಡಿದರೆ ಸಾಕು ಸೇಲ್ ಡೀಡ್ ನೀಡಿಕೆಗೆ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಪ್ರಸ್ತುತದ 99 ವರ್ಷ ಲೀಸ್ ರದ್ದು ಪಡಿಸಿ, ಸೇಲ್ ಡೀಡ್ ನೀಡಲಾಗುವುದು ಎಂದರು.

ತುಮಕೂರು, ಧಾರವಾಡ ಹಾಗೂ ಯಾದಗಿರಿ ಜಿಲ್ಲೆ ಕಡೇಚೂರ ಬಳಿ ಕೈಗಾರಿಕಾ ಕಾರಿಡಾರ್ ರಚಿಸಲಾಗುತ್ತಿದೆ ಪ್ರತಿ ಕಡೆ ಒಂದು ಸಾವಿರ ಕೋಟಿ ರೂ.ವೆಚ್ಚ ಮಾಡಲಾಗುತ್ತಿದೆ. ಕೈಗಾರಿಕಾ ಪ್ರದೇಶಗಳ ಸಮಸ್ಯೆ ಪರಿಹಾರ ಕಲ್ಪಿಸಲು ಕೈಗೊಳ್ಳಲಾಗುವುದು ಎಂದರು.