ಭಾರತ ಬಂದ್ : ವಿವಿಧ ಸಂಘಟನೆಯಿಂದ ಪ್ರತಿಭಟನೆ….. ಮನವಿ ಅರ್ಪಣೆ

Spread the love

ಮುಂಡಗೋಡ : ಭಾರತ ಬಂದ್ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಸಿ.ಐ.ಟಿ.ಯು., ಕೃಷಿ ಕೂಲಿಕಾರರ ಸಂಘ, ಮುಂಡಗೋಡ ತಾಲೂಕಾ ಭೂ ಹಕ್ಕುದಾರರ ಹೊರಾಟ ಸಮಿತಿ, ಕರ್ನಾಟಕ ಪ್ರಾಂತ ರೈತಸಂಘದವರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸಿ, ಮುಂಡಗೋಡ ತಹಶೀಲದಾರರ ಮೂಲಕ ಪ್ರಧಾನಮಂತ್ರಿಗಳಿಗೆ, ಮುಖ್ಯಮಂತ್ರಿಗಳಿಗೆ ಇಂದು ಮನವಿ ಸಲ್ಲಿಸಿದರು.

ಮೂರು ಕೃಷಿ ಕಾಯ್ದೆಗಳು, ವಿದ್ಯುತ್ ಮಸೂದೆ ರದ್ದತಿಗಾಗಿ, ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ಕಾನೂನು ಜಾರಿಗಾಗಿ, ಅಡುಗೆ ಅನಿಲ, ಡಿಸೇಲ್, ಪೆಟ್ರೋಲ್ ಇತ್ಯಾದಿ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ, ಭೂಮಿ ಕಸಿದುಕೊಳ್ಳುವ ಭೂ ಮಸೂದೆ ವಿರುದ್ಧ, ಕಾರ್ಮಿಕ ಕಾನೂನು ತಿದ್ದುಪಡಿ ವಿರುದ್ಧ, ೧೯೭೨ರ ಆದೇಶ ತೊಡಕಾಗಿದೆ ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಭೀಮಣ್ಣ ಭೋವಿ, ಕಾಂಗ್ರೆಸ ಕಿಸಾನ್ ಸೆಲ್ ಅಧ್ಯಕ್ಷ ಪ್ರದೀಪಗೌಡ ಶಿವನಗೌಡರ್, ಪೀರಜ್ಜಾ ಸಾಗರ, ನೂರಹ್ಮದ ಗದಗ, ಚಂದ್ರಶೇಖರ ಕುಂಬಾರ, ಶರೀಫ ವಡ್ಡರ, ಬಸವರಾಜ ಧಾರವಾಡ, ಲಕ್ಷ್ಮೀ ಕಲಾಲ, ನಿಂಗಪ್ಪ ಗೊಣೆನವರ್, ವಾಣಿ ತೇವರ, ಭೂತೇಶ ಚಿತ್ರಗಾರ, ಪಾಂಡುರಂಗ ನಿಂಬಾಯಿ ಮುಂತಾದವರಿದ್ದರು.

ಬಂದ್‌ಗೆ ಯಾವುದೇ ಪ್ರತಿಕ್ರಿಯೆ ಇಲ್ಲ : ಭಾರತ ಬಂದ್‌ಗೆ ಮುಂಡಗೋಡನಲ್ಲಿ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಮುಂಡಗೋಡನಲ್ಲಿ ಜನಜೀವನ ಎಂದಿನಂತೆ ಇತ್ತು. ವಾಹನ ಸಂಚಾರ, ವ್ಯಾಪಾರ ವಹಿವಾಟು ಎಂದಿನಂತೆ ಇತ್ತು.

ನ್ಯಾಯಬೆಲೆ ಅಂಗಡಿಯ ಗೋಧಿಯಲ್ಲಿ ಕಲ್ಲು, ಮಣ್ಣು ಇದೆ…..!

ಮುಂಡಗೋಡ : ಇಲ್ಲಿಯ ಕಲಾಲ ಓಣಿಯಲ್ಲಿರುವ ನ್ಯಾಯ ಬೆಲೆ ಅಂಗಡಿಯವರು ಪಡಿತರದಾರರಿಗೆ ನೀಡುವ ಗೋಧಿಯಲ್ಲಿ ಕಲ್ಲು, ಮಣ್ಣು ಇದೆ. ಈ ನ್ಯಾಯ ಬೆಲೆ ಅಂಗಡಿಯರ ಮೇಲೆ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ, ಸಿ.ಐ.ಟಿ.ಯು., ಕೃಷಿ ಕೂಲಿಕಾರರ ಸಂಘ, ಮುಂಡಗೋಡ ತಾಲೂಕಾ ಭೂ ಹಕ್ಕುದಾರರ ಹೋರಾಟ ಸಮಿತಿ, ಕರ್ನಾಟಕ ಪ್ರಾಂತ ರೈತಸಂಘದವರು ಇಂದು ತಹಸೀಲದಾರ ಕಚೇರಿಯಲ್ಲಿ ಅಧಿಕಾರಿಗಳ ಮುಂದೆ ಆಗ್ರಹಿಸಿ, ಪ್ರತಿಭಟನೆ ನಡೆಸಿದರು.

ನಂತರ ಆಹಾರ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆ ಕೈಬಿಟ್ಟರು.

ಈ ಸಂದರ್ಭದಲ್ಲಿ ಭೀಮಣ್ಣ ಭೋವಿ, ಪೀರಜ್ಜಾ ಸಾಗರ, ನೂರಹ್ಮದ ಗದಗ, ಚಂದ್ರಶೇಖರ ಕುಂಬಾರ, ಶರೀಫ ವಡ್ಡರ, ಬಸವರಾಜ ಧಾರವಾಡ, ಲಕ್ಷ್ಮೀ ಕಲಾಲ, ನಿಂಗಪ್ಪ ಗೊಣೆನವರ್, ವಾಣಿ ತೇವರ, ಭೂತೇಶ ಚಿತ್ರಗಾರ, ಪಾಂಡುರಂಗ ನಿಂಬಾಯಿ ಮುಂತಾದವರಿದ್ದರು.