ಶಿರಸಿಯಲ್ಲಿ ತೈಲ ಬೆಲೆ ಏರಿಕೆ ಖಂಡಿಸಿ ಡಿಕೆಶಿ ನೇತೃತ್ವದಲ್ಲಿ ಸೈಕಲ್ ಜಾಥಾ

ಶಿರಸಿ: ನಗರದಲ್ಲಿ ಇಂದು ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ವಿರುದ್ಧ, ತೈಲ ಬೆಲೆ ಏರಿಕೆ ಖಂಡಿಸಿ ಸೈಕಲ್ ಜಾಥಾ ನಡೆಯಿತು. ಕೋವಿಡ್ ನಿಯಮ ಹಿನ್ನೆಲೆಯಲ್ಲಿ ಡಿ.ಕೆ ಶಿವಕುಮಾರ್ ಸೈಕಲ್ ಜಾಥಾಗೆ ಉತ್ತರ ಕನ್ನಡ ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ. ಆದರೂ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಆರ್. ವಿ.ದೇಶಪಾಂಡೆ, ಮುಖಂಡರಾದ ಪ್ರಶಾಂತ ದೇಶಪಾಂಡೆ, ರವೀಂದ್ರ ನಾಯ್ಕ, ಕೃಷ್ಣ…

Read More

ಕರಾವಳಿ ಭಾಗದಲ್ಲಿ ಭಾರೀ ಮಳೆ ಸಾಧ್ಯತೆ

ಕಾರವಾರ : ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜುಲೈ 7 ರಿಂದ ಜುಲೈ 11ರವರೆಗೂ ಈ ಜಿಲ್ಲೆಗಳಲ್ಲಿ ವಿಪರೀತ ಮಳೆ ಸುರಿಯಲಿದೆ ಎಂದು ಹೇಳಲಾಗಿದೆ. ಹವಾಮಾನ ವರದಿ: ಬೆಂಗಳೂರು ಸೇರಿ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಬೆಳಗಾವಿ, ಬೀದರ್, ಧಾರವಾಡ, ಕಲಬುರಗಿ, ರಾಯಚೂರು, ಯಾದಗಿರಿ, ಬಳ್ಳಾರಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. 

Read More

ಹಿಂದಿ ಚಿತ್ರರಂಗದ ಹಿರಿಯ ನಟ ದಿಲೀಪಕುಮಾರ ಇನ್ನಿಲ್ಲ

ಮುಂಬೈ : ಹಿಂದಿ ಚಿತ್ರರಂಗದ ದಿಗ್ಗಜ ದಿಲೀಪ್ ಕುಮಾರ ಇಂದು ಬೆಳಗ್ಗೆ 7:30ಕ್ಕೆ ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ನಿಧನರಾದರು. 98 ವರ್ಷ ವಯಸ್ಸಿನ ಹಿರಿಯ ನಟ ದಿಲೀಪ್ ಕುಮಾರ್ ಬಹುಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ದಿಲೀಪ್‌ರನ್ನು ಹಲವು ಬಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೂನ್ 30 ರಂದು ಮುಂಬೈನ ಹಿಂದೂಜಾ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಗಿತ್ತು. ಇದಕ್ಕೂ ಮೊದಲು ದಿಲೀಪ್ ಕುಮಾರ್ ಅವರು ಜೂನ್ 6 ರಂದು ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಐದು ದಿನಗಳ ನಂತರ…

Read More

ಮನೆ ಮದ್ದು

ಪೆಟ್ಟು ಬಿದ್ದು ಊದುಕೊಂಡಿದ್ದರೆ ನುಗ್ಗೆ ಸೊಪ್ಪನ್ನು ಒಂದು ಬಟ್ಟೆಯಲ್ಲಿ ಗಂಟು ಕಟ್ಟಿ ಹೆಂಚಿನ ಮೇಲೆ ಬಿಸಿ ಮಾಡಿ ಶಾಖ ಕೊಟ್ಟರೆ ಕಡಿಮೆಯಾಗುತ್ತದೆ.

Read More

ಟಿಬೆಟಿಕಾಲೋನಿಯಲ್ಲಿ ದಲೈಲಾಮಾರ 86ನೇ ಹುಟ್ಟುಹಬ್ಬ ಆಚರಣೆ

ಮುಂಡಗೋಡ : ಟಿಬೆಟನ್ ಧರ್ಮಗುರು ದಲೈಲಾಮಾ ಅವರಿಗೆ ಇಂದು 86ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ.   ದಲೈಲಾಮಾರ ಹುಟ್ಟುಹಬ್ಬದ ಕಾರಣ ಇಡೀ ಮುಂಡಗೋಡ ಟಿಬೆಟಿಕಾಲೋನಿಯಲ್ಲಿ ಇಂದು ಸಂಭ್ರಮ ಮನೆ ಮಾಡಿದೆ. ಟಿಬೆಟಿಕಾಲೋನಿಯ ಬೌದ್ಧಮಠಗಳಲ್ಲಿ ದಲೈಲಾಮಾರ ಹುಟ್ಟುಹಬ್ಬದ ಅಂಗವಾಗಿ ಇಂದು ವಿಶೇಷ ಪೂಜೆ ಸಲ್ಲಿಸಲಾಯಿತು.   ಬೌದ್ಧ ದೇವತೆಗಳ ಎದುರು ಬೆಣ್ಣೆ ದೀಪ ಬೆಳಗಿಸಲಾಯಿತು. ವಿವಿಧ ರೀತಿಯ ನೈವೇದ್ಯವನ್ನು ದೇವರಿಗೆ ಹಿರಿಯ ಬೌದ್ಧ ಸನ್ಯಾಸಿಗಳು, ಬಿಕ್ಕುಗಳು ಸಮರ್ಪಿಸಿದರು.    ಬೌದ್ಧಮಠದಲ್ಲಿ ಎಲ್ಲಾ ಬೌದ್ಧ ಸನ್ಯಾಸಿಗಳು, ಬಿಕ್ಕುಗಳು ಬೌದ್ಧ ದೇವತೆಗಳಿಗೆ…

Read More

ಮೈನಳ್ಳಿ(ಚಿಗಳ್ಳಿ) ಜಿ.ಪಂ. ಕ್ಷೇತ್ರ : ಮೀಸಲಾತಿ ತಿದ್ದುಪಡಿಗೊಳಿಸುವಂತೆ ಮನವಿ

ಮುಂಡಗೋಡ : ಚುನಾವಣಾ ಆಯೋಗವು ಮುಂಡಗೋಡ ತಾಲೂಕಿನ ಮೈನಳ್ಳಿ(ಚಿಗಳ್ಳಿ) ಜಿ.ಪಂ. ಕ್ಷೇತ್ರ ಹಿಂದುಳಿದ ವರ್ಗ ಅ ಮಹಿಳೆ ಎಂಬ ಮೀಸಲಾತಿ ನೀಡಿದ್ದು, ಈ ಕ್ಷೇತ್ರಕ್ಕೆ ಅನುಸೂಚಿತ ಜಾತಿ (ಎಸ್.ಸಿ.) ಮೀಸಲಾತಿ ಪರಿಗಣಿಸಬೇಕೆಂದು ಚುನಾವಣಾ ಆಯೋಗಕ್ಕೆ ಕಾಂಗ್ರೆಸ ಮುಖಂಡ ಲಕ್ಷ್ಮಣ ಬನ್ಸೊಡೆ ಮನವಿ ಸಲ್ಲಿಸಿದ್ದಾರೆ.     ಅನುಸೂಚಿತ ಜಾತಿ ಜನಾಂಗದವರು ಚಿಗಳ್ಳಿ(ಮೈನಳ್ಳಿ) ವ್ಯಾಪ್ತಿಯಲ್ಲಿ ಶೇ.27ರಷ್ಟು ಜನಸಂಖ್ಯೆ ಇದ್ದರೂ ನಮ್ಮನ್ನು ಕಡೆಗಣಿಸಲಾಗಿದೆ. ಆದ್ದರಿಂದ ಈಗ ಹೊರಡಿಸಿದ ಮೀಸಲಾತಿ ಆದೇಶವನ್ನು ತಿದ್ದುಪಡಿಗೊಳಿಸಿ ಮರು ಆದೇಶ ಹೊರಡಿಸಬೇಕೆಂದು ಅವರು ಮನವಿಯಲ್ಲಿ ವಿನಂತಿಸಿದ್ದಾರೆ.

Read More

ನಮಗೆ ಅನ್ಯಾಯ ಆಗಿದೆ : ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದವರಿಂದ ಸರಕಾರಕ್ಕೆ ಮನವಿ

ಮುಂಡಗೋಡ : ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರಿಗೆ ಅನ್ಯಾಯ ಆಗಿದೆ ಎಂದು ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮುಖಾಂತರ ಸರಕಾರಕ್ಕೆ ಇಂದು ಮನವಿ ಸಲ್ಲಿಸಿದರು.   ಮೇ 2017 ರಲ್ಲಿ ಜಾರಿಯಾದ ಹೊಸ C&R ನಿಂದ 2016 ಕ್ಕಿಂತ ಮೊದಲು ಪ್ರಾಥಮಿಕ ಶಾಲೆಗಳಲ್ಲಿ 1ರಿಂದ 7ನೇ ತರಗತಿ ವರೆಗೆ ಬೋಧಿಸಲು  ನೇಮಕಾತಿ ಆದ ಶಿಕ್ಷಕರಿಗೆ ಸಾರಾಸಗಟಾಗಿ 1-5 ಬೋಧಿಸುವ ಶಿಕ್ಷಕರನ್ನಾಗಿ (ನಮ್ಮಲ್ಲಿ ಎಷ್ಟೇ ದೊಡ್ಡ ಮಟ್ಟದ ವಿದ್ಯಾರ್ಹತೆ, ಸೇವಾ ಅನುಭವ ಇದ್ದರೂ) ವಿಭಾಗಿಸಿ PST…

Read More

ಇಂದೂರ ಜಿ.ಪಂ. ಕ್ಷೇತ್ರ : ರವಿಗೌಡ ಪಾಟೀಲರಿಗೆ ಟಿಕೆಟ್ ನೀಡುವಂತೆ ಆಗ್ರಹ

ಮುಂಡಗೋಡ : ಚುನಾವಣಾ ಆಯೋಗವು ತಾ.ಪಂ., ಜಿ.ಪಂ. ಮೀಸಲಾತಿ ಪ್ರಕಟಿಸುತ್ತಿದ್ದಂತೆ ರಾಜಕೀಯ ಪಕ್ಷದಲ್ಲಿ ಚಟುವಟಿಕೆ ತೀವ್ರಗೊಂಡಿದೆ.   ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳ ಪಟ್ಟಿಯು ಹನುಮಂತನ ಬಾಲದಂತೆ ದಿನವೂ ಬೆಳೆಯುತ್ತಿದೆ. ತಾಲೂಕಿನಲ್ಲಿ ಇಂದೂರ, ಮೈನಳ್ಳಿ (ಚಿಗಳ್ಳಿ ) ಮತ್ತು ಪಾಳಾ ಎಂಬ ಮೂರು ಜಿಲ್ಲಾ ಪಂಚಾಯತಿ ಕ್ಷೇತ್ರಗಳಿವೆ. ಇಂದೂರು ಜಿಲ್ಲಾ ಪಂಚಾಯತ್ ಕ್ಷೇತ್ರ ಸಾಮಾನ್ಯವಾದರೆ ಮೈನಳ್ಳಿ (ಚಿಗಳ್ಳಿ ) ಮತ್ತು ಪಾಳಾ ಕ್ಷೇತ್ರ ಹಿಂದುಳಿದ ವರ್ಗ ಅ ಮಹಿಳೆಗೆ ಮೀಸಲಾಗಿದೆ.   ಇಂದೂರು ಜಿಲ್ಲಾ ಪಂಚಾಯತ್ ಕ್ಷೇತ್ರ ಕಳೆದ…

Read More

ಹನುಮಾಪುರ ಕಾಳಿಕಾಮಠದ “ಶ್ರೀಗಳು” ಅಸ್ತಂಗತ

ಮುಂಡಗೋಡ : ತಾಲೂಕಿನ ಹನುಮಾಪುರ ಕಾಳಿಕಾಮಠದ (ಹಿರೇಮಠ) ಸದಾನಂದ ಶಿವಾಚಾರ್ಯ ಸ್ವಾಮೀಜಿ ಇಂದು ವಿಧಿವಶರಾಗಿದ್ದಾರೆ.    ಕಳೆದ ಒಂದು ತಿಂಗಳಿನಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಶ್ರೀಗಳು, ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಶ್ರೀಗಳು ಇಂದು ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಕೊನೆಯುಸಿರೆಳೆದಿದ್ದಾರೆ.

Read More