S.S.L.C. ಪರೀಕ್ಷೆಗೆ ಸಕಲ ಸಿದ್ದತೆ

ಮುಂಡಗೋಡ : S.S.L.C. ಪರೀಕ್ಷೆಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಮುಂಡಗೋಡ ತಹಶೀಲದಾರ ಶ್ರೀಧರ ಮುಂದಲಮನಿ ತಿಳಿಸಿದ್ದಾರೆ. 1562 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾಗಲಿದ್ದಾರೆ. ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ ನೀಡಲು ಈಗಾಗಲೇ ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಬಸ್ ಸೌಕರ್ಯಗಳಿಲ್ಲದಿದ್ದರೆ ಖಾಸಗಿ ಶಾಲಾ ವಾಹನ, ಇಲಾಖೆ ವಾಹನಗಳನ್ನು ಬಳಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು. 256 ಸಿಬ್ಬಂದಿಗಳನ್ನು ನೇಮಿಸಲಾಗಿದೆ….. ಎಸ್.ಎಸ್.ಎಲ್.ಸಿ. ಪರೀಕ್ಷೆಗಾಗಿ ತಾಲೂಕಿನಲ್ಲಿ ಒಟ್ಟು 7 ಪರೀಕ್ಷಾ ಕೇಂದ್ರಗಳನ್ನು ಮಾಡಲಾಗಿದೆ. 769 ವಿದ್ಯಾರ್ಥಿಗಳು ಮತ್ತು 793 ವಿದ್ಯಾರ್ಥಿನಿಯರು ಸೇರಿ…

Read More

ಮನೆ ಮದ್ದು

ಹರಿವೆ ಸೊಪ್ಪಿಗೆ ಅರಿಶಿಣ ಸೇರಿಸಿ ಅರೆದು ಚರ್ಮಕ್ಕೆ ಹಚ್ಚಿದರೆ ಚರ್ಮದ ಕಾಂತಿ ಹೆಚ್ಚುತ್ತದೆ. ಹರಿವೆ ಸೊಪ್ಪಿನಿಂದ ರಸ ತೆಗೆದು ನಿತ್ಯವೂ ಎರಡು ಸಾರಿ ಸೇವಿಸಿದರೆ ಶರೀರಕ್ಕೆ ಪೋಷಕಾಂಶಗಳು ದೊರೆಯುತ್ತದೆ.

Read More

ಬಂಗಾರ ನೀಡುವುದಾಗಿ ೨೮ಲಕ್ಷರೂ. ಪಂಗನಾಮ

ಮುಂಡಗೋಡ: ಅಪರಿಚಿತ ವ್ಯಕಿಗಳು ಕಡಿಮೆ ಬೆಲೆಗೆ ಬಂಗಾರ ನೀಡುವುದಾಗಿ ನಂಬಿಸಿ ಹಣ ತೆಗೆದುಕೊಂಡು ಬಂಗಾರ ಖರೀದಿಗೆ ಬಂದಿದ್ದ ವ್ಯಾಪಾರಸ್ಥರ ೨೮ಲಕ್ಷ ರೂ. ಹಣದ ಬ್ಯಾಗ್‌ನ್ನು ಕಸಿದುಕೊಂಡು ಪರಾರಿಯಾದ ಘಟನೆ ತಾಲೂಕಿನ ಮಳಗಿ ಧರ್ಮಾ ಜಲಾಶಯದ ಬಳಿ ಶುಕ್ರವಾರ ಜರುಗಿದೆ. ಚಿಕ್ಕೋಡಿ ತಾಲೂಕಿನ ಶಿವನಗೌಡ ಪಾಟೀಲ ಹಾಗೂ ಆತನ ಸ್ನೇಹಿತ ಅಸ್ಲಂ ನದಾಫ್ ಎಂಬವರೆ ಹಣ ಕಳೆದುಕೊಂಡ ವ್ಯಾಪಾರಸ್ಥರಾಗಿದ್ದಾರೆ. ನಮಗೆ ಹಳೆಯ ಬಂಗಾರದ ಸಿಕ್ಕಿದೆ ಅದನ್ನು ಮಾರಾಟ ಮಾಡುತ್ತೇವೆ ಎಂದು ಶಿವನಗೌಡ ಪಾಟೀಲಗೆ ಅಪರಿಚಿತರು ನಂಬಿಸಿ ಅರ್ಧ ಕೆಜಿಗೂ…

Read More

ಗೋಡಂಬಿ ಉದ್ಯಮಿಯೊಬ್ಬರ ಬಳಿ 25ಲಕ್ಷರೂ. ಇದ್ದ ಬ್ಯಾಗ್ ಕಸಿದು ನಾಪತ್ತೆಯಾದ ಇಬ್ಬರು ಅಪರಿಚಿತರು

ಮುಂಡಗೋಡ : ಗೋಡಂಬಿ ಉದ್ಯಮಿಯೊಬ್ಬರು ಗೋಡಂಬಿ ಬೀಜ ಖರೀದಿಗಾಗಿ ಮುಂಡಗೋಡ ತಾಲೂಕಿನ ಮಳಗಿಗೆ ಬಂದ ವೇಳೆಯಲ್ಲಿ ಜಲಾಶಯದ ಹತ್ತಿರ ಇಬ್ಬರು ಅಪರಿಚಿತರು ಉದ್ಯಮಿ ಕೈಯಲ್ಲಿದ್ದ ಬ್ಯಾಗ್ ಕಸಿದು ನಾಪತ್ತೆಯಾದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಚಿಕ್ಕೋಡಿಯ ಗೋಡಂಬಿ ಉದ್ಯಮ ಶಿವನಗೌಡ ಪಾಟೀಲ ಹಾಗೂ ಅವನ ಸ್ನೇಹಿತ ಅಸ್ಲಾಂ ನದಾಫ ಇಬ್ಬರು ಸೇರಿ ಗೋಡಂಬಿ ಬೀಜ ಖರೀದಿಗೆ ತಾಲೂಕಿನ ಮಳಗಿಯ ಧರ್ಮಾ ಜಲಾಶಯದ ಹತ್ತಿರ ಬಂದಾಗ ಇಬ್ಬರು  ಅಪರಿಚಿತರು ಅವರನ್ನು ಮಾತನಾಡಿಸಿದ್ದಾರೆ. ನಂತರ ಅವರು ಮುಂದಕ್ಕೆ ಹೋಗುತ್ತಿದ್ದಂತೆ ಇಬ್ಬರು…

Read More

ಎಸ್.ಎಸ್.ಎಲ್.ಸಿ. ಪರೀಕ್ಷೆಯ ಪೂರ್ವಭಾವಿ ಸಭೆ

ಮುಂಡಗೋಡ : ಎಸ್.ಎಸ್.ಎಲ್.ಸಿ. ಪರೀಕ್ಷೆಯ ಕುರಿತು ಪೂರ್ವಭಾವಿ ಸಭೆಯು ತಹಶೀಲದಾರ ಶ್ರೀಧರ ಮುಂದಲಮನಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆಯಿತು.    ಪರೀಕ್ಷೆಯ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು.    ಸಭೆಯಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ ಕಟ್ಟಿ, ಬಿ.ಇ.ಒ. ವಿ.ವಿ.ನಡುವಿನಮನಿ, ಸಮಾಜ ಕಲ್ಯಾಣಾಧಿಕಾರಿ, ರಮೇಶ ಅಂಬಿಗೇರ, ಶಾಲಾ ಮುಖ್ಯಸ್ಥರು, ಅಧಿಕಾರಿಗಳು ಮುಂತಾದವರಿದ್ದರು. 

Read More

ಮಳಗಿಯ ಸೆಂಟ್ ಮಿಲಾಗ್ರಿಸ್ ಬ್ಯಾಂಕ್ ನಲ್ಲಿ ಕಳ್ಳತನ

ಮುಂಡಗೋಡ : ತಾಲೂಕಿನ  ಮಳಗಿ ಗ್ರಾಮದಲ್ಲಿನ  ಸೆಂಟ್ ಮಿಲಾಗ್ರಿಸ್  ಬ್ಯಾಂಕ್ ನ   ಬಾಗಿಲು  ಮುರಿದು  53ಸಾವಿರ ರೂ. ಕಳ್ಳತನ  ಮಾಡಿಕೊಂಡು  ಹೋದ  ಘಟನೆ  ಗುರುವಾರ ರಾತ್ರಿ  ಜರುಗಿದೆ. ಮಳಗಿ  ಪೋಲಿಸ್  ಠಾಣೆಯಿಂದ  ನೂರು ಮೀಟರ್  ಅಂತರದಲ್ಲಿರುವ  ಸೆಂಟ್  ಮಿಲಾಗ್ರಿಸ್  ಬ್ಯಾಂಕ್  ಇದ್ದು  ಬ್ಯಾಂಕ್ ನ  ಬಾಗಿಲು  ಮುರಿದು  ಒಳನುಗ್ಗಿರುವ  ಕಳ್ಳರು  ಕಬ್ಬಿಣದ  ಕಪಾಟಿನಲ್ಲಿ ದ್ದ  53ಸಾವಿರ  ರೂ. ಹಣವನ್ನು  ಕಳ್ಳತನ  ಮಾಡಿಕೊಂಡು  ಹೋಗಿದ್ದು   ಸ್ಥಳಕ್ಕೆ  ಭೇಟಿ  ನೀಡಿರುವ  ಪೋಲಿಸರು   ಪರಿಶೀಲನೆ  ನಡೆಸಿದ್ದಾರೆ.

Read More

ಜಿ.ಪಂ., ತಾ.ಪಂ. ಚುನಾವಣೆ ಮುಂದೂಡಿಕೆ : ಆಕಾಂಕ್ಷಿಗಳಿಗೆ ಬಿಗ್ ಶಾಕ್

ಬೆಂಗಳೂರು : ಈಗಾಗಲೇ ಜಿಲ್ಲಾ ಮತ್ತು ತಾಲೂಕು ಪಂಚಾಯಿಗಳಿಗೆ ರಾಜ್ಯ ಸರ್ಕಾರದಿಂದ ಮೀಸಲಾತಿಯನ್ನು ಪ್ರಕಟಗೊಳಿಸಲಾಗಿದೆ. ಇನ್ನೇನು ಚುನಾವಣೆ ಕೂಡ ಸದ್ಯದಲ್ಲೇ ಘೋಷಣೆ ಕೂಡ ಆಗಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಆದ್ರೇ ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರವು ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆಯನ್ನು ಡಿಸೆಂಬರ್ ವರೆಗೆ ಮುಂದೂಡುವಂತ ನಿರ್ಣಯವನ್ನು, ಇಂದಿನ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡಿದೆ. ಈ ಮೂಲಕ ಜಿಲ್ಲಾ, ತಾಲೂಕು ಪಂಚಾಯ್ತಿ ಚುನಾವಣೆ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್ ನೀಡಿದೆ. ಈ ಕುರಿತಂತೆ ಇಂದಿನ ಮುಖ್ಯಮಂತ್ರಿ…

Read More