ಉತ್ತರಕನ್ನಡ : ವಾರದಲ್ಲಿ 400 ಮಂದಿಗೆ ಕೊರೊನಾ ಸೋಂಕು

Spread the love

ಕಾರವಾರ : ಜಿಲ್ಲೆಯಲ್ಲಿ ಆ.6ರಿಂದ 12ರವರೆಗೆ ಒಟ್ಟು 400 ಮಂದಿಗೆ ಕೋವಿಡ್ ದೃಢಪಟ್ಟಿದೆ. ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಈ ಅವಧಿಯಲ್ಲಿ 410 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್‌ನ ಎರಡನೇ ಅಲೆಯು ಅಬ್ಬರಿಸಿದ ಬಳಿಕ ಕೋವಿಡ್ ಸೋಂಕಿತರ ಪ್ರಮಾಣ ಕಡಿಮೆ ಯಾಗಿತ್ತು. ದಿನವೊಂದಕ್ಕೆ 300-400 ಪ್ರಕರಣಗಳಿಂದ ಇಳಿಕೆಯಾಗಿ, ಬಹುತೇಕ ದಿನಗಳಲ್ಲಿ 50ರ ಆಸುಪಾಸಿನಲ್ಲಿ ದೃಢಪಡುತ್ತಿತ್ತು. ಆದರೆ, ಕೆಲವು ದಿನ ಗಳಿಂದ ಮತ್ತೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದ್ದು, ಆ.11ರಂದು ಗರಿಷ್ಠ 83 ಮಂದಿಗೆ ಕೋವಿಡ್ ಖಚಿತವಾಗಿತ್ತು.

ಜಿಲ್ಲೆಗೆ ಹೊರ ರಾಜ್ಯಗಳಿಂದ ಬರುವ ಪ್ರಯಾಣಿಕರ ಮೇಲೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ನಿಗಾ ವಹಿಸಿದೆ. ಗೋವಾ-ಕರ್ನಾಟಕ ಗಡಿ ಮಾಜಾಳಿಯಲ್ಲಿರುವ ಚೆಕ್‌ಪೋಸ್ಟ್‌ಗಳಲ್ಲಿ ಅಂತರರಾಜ್ಯ ಪ್ರಯಾಣಿಕರನ್ನು ಪರಿಶೀಲಿಸಲಾಗುತ್ತಿದೆ. 72 ಗಂಟೆಗಳ ಆರ್.ಟಿ.ಪಿ.ಸಿ.ಆರ್ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಇಲ್ಲದವರನ್ನು ಗಡಿ ದಾಟಲು ಅವಕಾಶ ನೀಡುತ್ತಿಲ್ಲ. ಆದರೆ, ರಾಜ್ಯದ ಇತರ ಜಿಲ್ಲೆಗಳಿಂದ ಬರುವವರಿಗೆ ಯಾವುದೇ ನಿರ್ಬಂಧವಿಲ್ಲ.

ಕಾರವಾರ, ಅಂಕೋಲಾ, ಕುಮಟಾ ಹಾಗೂ ಹೊನ್ನಾವರ ತಾಲ್ಲೂಕುಗಳಲ್ಲಿ ಕೆಲವು ದಿನಗಳಿಂದ ಹೆಚ್ಚಿನ ಕೋವಿಡ್ ಪ್ರಕರಣಗಳು ವರದಿ ಯಾಗುತ್ತಿವೆ. ಉಳಿದಂತೆ, ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಹಳಿ ಯಾಳ ತಾಲ್ಲೂಕುಗಳಲ್ಲಿ ಸೋಂಕು ದೃಢಪಡುತ್ತಿವೆ.