ನಿಸರ್ಗ ವೈನ್ ಶಾಪ್‌ನ ಕಳ್ಳತನ

Spread the love

ಮುಂಡಗೋಡ : ತಾಲೂಕಿನ ಮಳಗಿ ಗ್ರಾಮದ ನಿಸರ್ಗ ವೈನ್ ಶಾಪ್‌ನ ಶೆಟರ್ ಕತ್ತರಿಸಿ ಒಳಗಿದ್ದ ಮದ್ಯದ ಬಾಟಲಿ, ಹಾಗೂ ೧೦ಸಾವಿರರೂ. ನಗದು ಮತ್ತು ಸಿಸಿಟಿವಿ, ಡಿವಿಆರ್ ದುಷ್ಕರ್ಮಿಗಳು ಕದ್ದುಕೊಂಡು ಹೋದ ಘಟನೆ ಸಂಭವಿಸಿದೆ.
ವೈನ್ ಶಾಪ್‌ನಲ್ಲಿದ್ದ ಸಿಸಿಟಿವಿ, ಡಿವಿಆರ್‌ನ್ನು ಕಳ್ಳರು ಕದ್ದುಕೊಂಡು ಹೋಗಿರುವುದರಿಂದ ಕಳ್ಳರ ಪತ್ತೆ ಮಾಡಲು ಪೊಲೀಸರಿಗೆ ಸ್ವಲ್ಪ ಕಷ್ಟವಾಗಲಿದೆ ಎಂದು ಹೇಳಲಾಗುತ್ತಿದೆ.
ಘಟನಾಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಕೆಲವು ವಾರಗಳ ಹಿಂದೆ ಮಳಗಿ ಸೆಂಟ್ ಮಿಲಾಗ್ರಿಸ್ ಸೊಸೈಟಿಯಲ್ಲಿ ಕಳ್ಳತನವಾಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.