ಬಸವನಹೊಂಡ ಸ್ವಚ್ಛಗೊಳಿಸುವಂತೆ ಬಿಜೆಪಿ ಯುವ ಮೋರ್ಚಾ ಮನವಿ

ಮುಂಡಗೋಡ : ನಗರದ ಬಸವನ ಹೊಂಡವನ್ನು ಸ್ವಚ್ಛಗೊಳಿಸುವಂತೆ ಬಿಜೆಪಿ ಯುವ ಮೋರ್ಚಾ ಮುಂಡಗೋಡ ಪಟ್ಟಣ ಪಂಚಾಯತ ಅಧ್ಯಕ್ಷರಿಗೆ, ಸದಸ್ಯರಿಗೆ ಮನವಿಯೊಂದು ಸಲ್ಲಿಸಿದೆ. ಬಸವನ ಹೊಂಡದಲ್ಲಿ ಕಳೆದ 4-5 ವರ್ಷಗಳಿಂದ 4 ಜನರು ಸಾವನ್ನಪ್ಪಿದ್ದಾರೆ. ಹಿಂದುಗಳ ಆರಾಧ್ಯ ದೈವವಾದ ಗಣೇಶನನ್ನು ಗಣೇಶ ಹಬ್ಬದಲ್ಲಿ ಇದೇ ಹೊಂಡದಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಆದ ಕಾರಣ ಈ ಹೊಂಡವನ್ನು ಸ್ವಚ್ಛಗೊಳಿಸಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲು ಅನುವು ಮಾಡಿಕೊಡಬೇಕೆಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಗಣೇಶ ಶಿರಾಲಿ ಅವರು ಪಟ್ಟಣ ಪಂಚಾಯತ ಅಧ್ಯಕ್ಷರಿಗೆ,…

Read More

ಗುಡ್ಡದ ಆಂಜನೇಯ ದೇವಸ್ಥಾನಕ್ಕೆ ನೀರು, ವಿದ್ಯುತ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ಮನವಿ

ಮುಂಡಗೋಡ : ನ್ಯಾಸರ್ಗಿ, ಕುಂದರಗಿ ಗ್ರಾಮಕ್ಕೆ ಹೊಂದಿಕೊಂಡಿರುವ ಶ್ರೀಸೂರ್ಯನಾರಾಯಣ ಮತ್ತು ಗುಡ್ಡದ ಆಂಜನೇಯ ದೇವಸ್ಥಾನದ ಗುಡ್ಡದ ಮೇಲ್ಭಾಗದಲ್ಲಿ ನೀರಿನ ಪೂರೈಕೆ, ವಿದ್ಯುತ್ ಸೌಕರ್ಯದ ವ್ಯವಸ್ಥೆ ಕಲ್ಪಿಸಿಕೊಡಬೇಕಾಗಿ ಗ್ರಾಮಸ್ಥರು, ಭಕ್ತರು, ದೇವಸ್ಥಾ ಭಕ್ತ ಮಂಡಳಿಯವರು ಇಂದು ಬಾಚಣಕಿ ಗ್ರಾಮ ಪಂಚಾಯತ ಅಧ್ಯಕ್ಷರು, ಸದಸ್ಯರಿಗೆ ಮನವಿ ಅರ್ಪಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಅಯ್ಯಪ್ಪ ಭಜಂತ್ರಿ, ಉದಯ ಶಿರಾಲಿ, ವೆಂಕಟೇಶ ಕಾಟವೇಕರ, ಮಾಂತೇಶ ಕೇಣಿ, ಅಣ್ಣಪ್ಪ ಭೋವಿ ಮುಂತಾದವರಿದ್ದರು.

Read More

500ಗ್ರಾಂ. ಗಾಂಜಾ ಮಾರಾಟ : ನಾಲ್ವರ ಬಂಧನ

ಮುಂಡಗೋಡ :  ಗಾಂಜಾ  ಮಾರಾಟ  ಮಾಡುತ್ತಿದ್ದಾಗ  ಪೋಲೀಸರು  ದಾಳಿ  ನಡೆಸಿ  ನಾಲ್ಕು ಜನರನ್ನು  ಬಂಧಿಸಿದ  ಘಟನೆ  ಜರುಗಿದೆ.  ತಾಲೂಕಿನ ಸಾಲಗಾಂವ  ಗ್ರಾಮದ  ಗಂಗಪ್ಪ  ಮಾಯಪ್ಪ  ಪರಸಣ್ಣನವರ, ಇಮ್ರಾನ್ ಅಹ್ಮದ್  ತಂದೆ  ಮಕ್ಬೂಲ್  ಅಹ್ಮದ ಬ್ಯಾಡಗಿ, ಇಫಾ೯ನ  ಅಬ್ದುಲ್ ಖಾದರ್  ತಿಮ್ಮಾಪುರ, ಅಕ್ಕಿಆಲೂರ ಹಾನಗಲ್,  ಮಹ್ಮದ್ ಆಸ್ಪಕ್, ಅಕ್ಕಿಆಲೂರ   ಎಂಬವರೇ  ಬಂಧಿತ  ಆರೋಪಿಗಳಾಗಿದ್ದಾರೆ.    ಸುಮಾರು  500ಗ್ರಾಂ.   ಗಾಂಜಾ  ಮಾರಾಟ  ಮಾಡುತ್ತಿರುವಾಗ  ಪೊಲೀಸರು  ದಾಳಿ  ನಡೆಸಿ  ಆರೋಪಿಗಳನ್ನು  ಬಂಧಿಸಿದ್ದಾರೆ.

Read More

ಗೋಕರ್ಣ: ಸಮುದ್ರದಲ್ಲಿ ಮುಳುಗಿ ಬೆಂಗಳೂರಿನ ಪ್ರವಾಸಿ ಸಾವು

ಗೋಕರ್ಣ: ಇಲ್ಲಿಯ ‍ಪ್ಯಾರಡೈಸ್ ಕಡಲತೀರದಲ್ಲಿ ಮಂಗಳವಾರ ಈಜಲು ಸಮುದ್ರಕ್ಕೆ ಇಳಿದ ಇಬ್ಬರಲ್ಲಿ ಒಬ್ಬರು ಮುಳುಗಿ ಮೃತಪಟ್ಟಿದ್ದಾರೆ. ಮತ್ತೊಬರನ್ನು ರಕ್ಷಿಸಲಾಗಿದೆ. ಮೃತರನ್ನು ಬೆಂಗಳೂರಿನ ಅದ್ವೈತ್ ದೀಬಬ್ ಜೈನ್ (20) ಎಂದು ಗುರುತಿಸಲಾಗಿದೆ. ಮುಂಬೈಯ ಕೆ.ಶಿಮೊನೆ ಬರ್ಡೆ (23) ಎಂಬುವವರನ್ನು ನೀರಿನಿಂದ ಮೇಲೆಳೆದು ತರಲಾಗಿದೆ. ಮುಂಬೈಯಿಂದ ನಾಲ್ವರು ಹಾಗೂ ಬೆಂಗಳೂರಿನಿಂದ ಅದ್ವೈತ್ ನಾಲ್ಕು ದಿನಗಳ ಹಿಂದೆ ಗೋಕರ್ಣ ಪ್ರವಾಸಕ್ಕೆ ಬಂದಿದ್ದರು. ಐವರು ಮಂಗಳವಾರ ಸಂಜೆ ಕಡಲತೀರಕ್ಕೆ ಹೋಗಿದ್ದಾಗ ಅವಘಡ ನಡೆದಿದೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಹೋದ ಕರಾವಳಿ ಕಾವಲು…

Read More

ಪುತ್ರನಿಗೆ ಸ್ಥಾನ ಕಲ್ಪಿಸಲು ಬಿಎಸ್ ವೈ ಬಿಗಿಪಟ್ಟು

ಬೆಂಗಳೂರು : ಹೊಸ ಸಚಿವ ಸಂಪುಟ ರಚನೆಗೆ ಕ್ಷಣಗಣನೆ ಆರಂಭವಾಗಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ನಿಷ್ಠಾವಂತರನ್ನು ಸಂಪುಟಕ್ಕೆ ಸೇರಿಸುವ ಕುರಿತು ಕಳೆದ ಕೆಲವು ದಿನಗಳಿಂದ ತೆರೆಮರೆಯಲ್ಲಿ ಗಂಭೀರ ಚರ್ಚೆಗಳು ನಡೆದಿವೆ. ಮೊದಲ ಸುತ್ತಿನಲ್ಲಿ ಕೆಲವೇ ಕೆಲವು ಸಚಿವರ ಪ್ರಮಾಣ ವಚನ ನಡೆಯಲಿದೆ ಎಂದು ಬಿಜೆಪಿ ಉನ್ನತ ಮೂಲಗಳು ತಿಳಿಸಿವೆ, ಯಡಿಯೂರಪ್ಪ ಕ್ಯಾಂಪ್ ನ ಹಲವರಿಗೆ ಮಹತ್ವದ ಖಾತೆಗಳು ದೊರೆಯಲಿದೆ ಎಂದು ತಿಳಿದು ಬಂದಿದೆ, ಮಾಜಿ ಮುಖ್ಯಮಂತ್ರಿಗೆ ಮತ್ತು…

Read More

ಬಾಚಣಕಿ ಜಲಾಶಯಕ್ಕೆ ಬಾಗಿನ ಅರ್ಪಣೆ

ಮುಂಡಗೋಡ : ತಾಲೂಕಿನ ಬಾಚಣಕಿ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಇಂದೂರ, ಕೊಪ್ಪ ಮತ್ತು ಬಾಚಣಕಿ ಗ್ರಾಮದವರು ಇಂದು ಬಾಗಿನ ಅರ್ಪಿಸಿದರು. ಈ ಸಂದರ್ಭದಲ್ಲಿ ಮಾದೇವಪ್ಪ ನಡಗೇರಿ, ಬಾಬುಗೌಡ ಪಾಟೀಲ, ಮಂಜುನಾಥ ಅಣ್ವೇಕರ, ನಿಂಗಪ್ಪ ಶಿಂಬ್ರಿ, ಉಳವಯ್ಯ ಹಿರೇಮಠ, ತಂಗಚ್ಚ ಕೊಪ್ಪ, ಶಿವಪ್ಪ ಮಳಲಿ, ಅಶೋಕ ತಡಸದ, ಮುಕ್ತುಂಸಾಬ ಬಾಳೆಕಾಯಿ, ಪ್ರಕಾಶ ಹರ್ಡೇಕರ, ಹನ್ಮಂತ ಬಳ್ಳಾರಿ ಮುಂತಾದವರಿದ್ದರು.

Read More

ಕರ್ನಾಟಕದಲ್ಲಿ ಕೊರೊನಾ ಏರಿಕೆ; ಮತ್ತೆ ರಾತ್ರಿ, ವೀಕೆಂಡ್ ಕರ್ಫ್ಯೂ ಜಾರಿಗೆ ಸಲಹೆ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಏರಿಕೆ ಬೆನ್ನಲ್ಲೇ ಕರ್ನಾಟಕ ತಾಂತ್ರಿಕ ಸಲಹಾ ಸಮಿತಿ, ಕೊರೊನಾ ನಿಯಂತ್ರಣಕ್ಕೆ ಕೆಲವೊಂದು ಸಲಹೆಗಳನ್ನು ರಾಜ್ಯ ಸರ್ಕಾರದ ಮುಂದಿಟ್ಟಿದೆ. ರಾಜ್ಯದ ಗಡಿ ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು, ಕರ್ನಾಟಕದಲ್ಲಿಯೂ ಕೆಲವು ದಿನಗಳಿಂದ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿದೆ. ಹೀಗಾಗಿ ಕೆಲವು ಕೊರೊನಾ ನಿಯಮಗಳನ್ನು ರಾಜ್ಯದಲ್ಲಿ ಮತ್ತೆ ಜಾರಿಗೆ ತರುವ ಕುರಿತು ಚರ್ಚೆಗಳು ನಡೆಯುತ್ತಿವೆ. ಸದ್ಯಕ್ಕೆ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಕೈಮೀರಿ ಹೋಗುವ ಮುನ್ನ ಕೊರೊನಾ ನಿಯಂತ್ರಣಕ್ಕೆ ಮತ್ತೆ ರಾತ್ರಿ ಕರ್ಫ್ಯೂ ಹಾಗೂ…

Read More

ಇಂದು ರಾತ್ರಿ ಪಟ್ಟಿ ಬಿಡುಗಡೆ, ನಾಳೆಯೇ ಪ್ರಮಾಣ ವಚನ ಕಾರ್ಯಕ್ರಮ?

ಬೆಂಗಳೂರು : ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಈಗಾಗಲೇ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಿದ್ದಾರೆ. ಅದರಲ್ಲೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ನಿನ್ನೆ ರಾತ್ರಿ ಮಹತ್ವದ ಚರ್ಚೆಯನ್ನು ಮಾಡಿದ್ದರು. ಜೊತೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೂ ನಡ್ಡಾ ಜೊತೆಗಿನ ಚರ್ಚೆಯಲ್ಲಿ ಭಾಗಿಯಾಗಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ…

Read More