ಸರಕಾರಿ ಜಮೀನು ಒತ್ತುವರಿಯನ್ನು ಖುಲ್ಲಾ ಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಮುಂಡಗೋಡ : ಸನವಳ್ಳಿ ಗ್ರಾಮದ ಸರವೆ ನಂ.51ರಲ್ಲಿ ನಿವೇಶನ ಹಕ್ಕುಪತ್ರ ಮಂಜೂರಿ ಆದ ಸರಕಾರಿ ಜಮೀನನ್ನು ಒತ್ತುವರಿ ಮಾಡಿದವರನ್ನು ಖುಲ್ಲಾ ಪಡಿಸಲು ಒತ್ತಾಯಿಸಿ ಸನವಳ್ಳಿ ಗ್ರಾಮದ ನಿವೇಶನ ಮೂಂಜೂರುದಾರರು ಮತ್ತು ಗ್ರಾಮಸ್ಥರು ಇಂದು ಮುಂಡಗೋಡ ತಹಸೀಲದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು. ದಿ.26ರೊಳಗೆ ನಮ್ಮ ಬೇಡಿಕೆ ಈಡೇರಿಸದಿದ್ದರೆ ದಿ.26ರಂದು ಅನಿರ್ದಿಷ್ಟ ಕಾಲದವರೆಗೆ ತಹಶೀಲದಾರ ಮುಂಡಗೋಡ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಸುರೇಶ ಕೆರಿಹೊಲದವರ್, ದಿನೇಶ ಕೆರಿಹೊಲದವರ್, ಮಾದೇವಪ್ಪ ಕ್ಯಾಮನಕೇರಿ,…

Read More

ವಿದ್ಯಾರ್ಥಿಗಳಿಗೆ ದೇಶಪಾಂಡೆ ರುಡಸೆಟಿಯಿಂದ ಬಿಸ್ಕಿಟ್ ವಿತರಣೆ

ಮುಂಡಗೋಡ : ಇಂದು ಆರಂಭವಾಗಿರುವ ಎಸ್.ಎಸ್.ಎಲ್.ಸಿ. ಪರೀಕ್ಷೆಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಧೈರ್ಯ ತುಂಬಿ ದೇಶಪಾಂಡೆ ರುಡಸೆಟಿ ಅವರು ನೀಡಿದ ಬಿಸ್ಕಿಟಗಳನ್ನು ಕಾಂಗ್ರೆಸ ಮುಖಂಡರು,. ಕಾರ್ಯಕರ್ತರು ವಿತರಿಸಿದರು. ಪರೀಕ್ಷಾ ಕೇಂದ್ರಗಳಿಗೆ ತೆರಳಿದ ಕಾಂಗ್ರೆಸ ಮುಖಂಡರು, ಕಾರ್ಯಕರ್ತರು ಪರೀಕ್ಷೆಯಲ್ಲಿ ಚನ್ನಾಗಿ ಉತ್ತರ ಬರೆಯುವಂತೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ತಾಲೂಕಾ ಬ್ಲಾಕ ಕಾಂಗ್ರೆಸ ಅಧ್ಯಕ್ಷರಾದ ಕೃಷ್ಣ ಹಿರೇಹಳ್ಳಿ, ನಗರ ಅಧ್ಯಕ್ಷ ಆಲೆಹಸನ್ ಬೆಂಡಿಗೇರಿ, ಪ.ಪಂ.ಸದಸ್ಯರಾದ ಮಹ್ಮದಗೌಸ ಮಕಾನದಾರ ಮತ್ತು ಜಾಫರ ಹಂಡಿ, ದೇಶಪಾಂಡೆ ರುಡಸೆಟಿಯ ಸಿಬ್ಬಂದಿ ವಿಜಯಾ…

Read More

ಯುವಕನ ಕೊಲೆ

ಮುಂಡಗೋಡ : ಮುಂಡಗೋಡ. ಪಟ್ಟಣದ  ಅಯ್ಯಪ್ಪ   ಸ್ವಾಮಿ  ದೇವಸ್ಥಾನದ  ಸನಿಹದಲ್ಲಿ  ವ್ಯಕ್ತಿಯೊಬ್ಬನನ್ನು   ಚಾಕುವಿನಿಂದ  ಕುತ್ತಿಗೆ  ಕೊಯ್ದು ಬೀಕರವಾಗಿ   ಕೊಲೆಯಾದ  ಘಟನೆ  ಭಾನುವಾರ  ನಸುಕಿನ  ಜಾವ  ನಡೆದಿದೆ.  ಪಟ್ಟಣದ  ಕಂಬಾರಗಟ್ಟಿಯ ನಿವಾಸಿ  ವಿಜಯ ಈಳಿಗೇರ (25) ಎಂಬವನೇ  ಕೊಲೆಯಾದ  ವ್ಯಕ್ತಿಯಾಗಿದ್ದಾನೆ.  ವಿಜಯ  ತನ್ನ  ಕೆಎ 31ಇಬಿ7686 ಬೈಕ್ ಮೇಲೆ  ಬಂದಿದ್ದು  ಈ  ವೇಳೆ  ಯಾವುದೊ  ವಿಷಯಕ್ಕೆ ಬೇರೆಯವರೊಂದಿಗೆ   ಜಗಳ  ಮಾಡಿಕೊಂಡಿದ್ದು  ಈ  ವೇಳೆ  ಆರೋಪಿಗಳು  ವಿಜಯನ ತಲೆಗೆ  ಹೊಡೆದು  ನಂತರ  ಚಾಕುವಿನಿಂದ  ಕುತ್ತಿಗೆ  ಕೊಯ್ದು  ಕೊಲೆ  ಮಾಡಿ  ರಸ್ತೆ …

Read More

ರಾಘವೇಂದ್ರ ಟಪಾಲದವರ್ ನೇಮಕ

ಮುಂಡಗೋಡ: ಜೈಭೀಮ ದಲಿತ ಸೇನಾ ಸಮಿತಿಯ ಉತ್ತರಕನ್ನಡ ಜಿಲ್ಲಾಧ್ಯಕ್ಷರನ್ನಾಗಿ ಮುಂಡಗೋಡದ ರಾಘವೇಂದ್ರ ಟಪಾಲದವರ್ ಅವರನ್ನು ನೇಮಕ ಮಾಡಲಾಗಿದೆ ಎಂದು ಜೈಭೀಮ ದಲಿತ ಸೇನಾ ಸಮಿತಿಯ ರಾಜ್ಯಾಧ್ಯಕ್ಷ ಮುಳ್ಳೂರ ಶ್ರೀನಿವಾಸ ತಿಳಿಸಿದ್ದಾರೆ.

Read More

ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲ : ಬಿ.ಕೆ.ಹರಿಪ್ರಸಾದ

ಮುಂಡಗೋಡ : ೨೦ ಲಕ್ಷ ಕೋಟಿ ಪಿಎಂ ಕೇರ್ ಹಣದಲ್ಲಿ ೨೦ ಸಾವಿರ ಕೋಟಿ ಹಣವನ್ನೂ ಲಸಿಕೆಗೆ ಖರ್ಚು ಮಾಡಿಲ್ಲ ಈ ಸರ್ಕಾರ. ಮಾನವೀಯತೆ ಇಲ್ಲದವರು ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಮಂತ್ರಿಗಳಾಗಿದ್ದಾರೆ. ಎರಡೂ ಸರ್ಕಾರಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಕೋವಿಡ್ ವಿಷಯದಲ್ಲಿ ನಿಜವನ್ನು ಹೇಳುವಲ್ಲಿ ವಿಫಲವಾಗಿದೆ. ಕೊರೊನಾ ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಬರೀ ಪೊಳ್ಳು ಭರವಸೆಗಳ ಮೂಲಕ ಜನರ ದಾರಿತಪ್ಪಿಸುತ್ತಿದೆ. ಹಾಗಾಗಿಯೇ  ಕೊರೊನಾ ನಿರ್ವಹಣೆ ಪ್ರಕರಣಗಳಲ್ಲಿ ಸರ್ಕಾರದ…

Read More

ವರ್ತಿಕಾ ಅವರಿಗೆ ಸಿಗದ ವರ್ಗಾವಣೆ ಆದೇಶ : ಎಸ್.ಪಿ. ಮತ್ತೆ ಬದಲಾವಣೆ…..?

ಕಾರವಾರ : ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಶಿವಪ್ರಕಾಶ್ ದೇವರಾಜುರನ್ನು ಎರಡು ದಿನದ ಹಿಂದೆ ವರ್ಗಾವಣೆ ಮಾಡಿ ವರ್ತಿಕಾ ಕಟಿಯಾರ್‌ರನ್ನು ಎಸ್ಪಿಯಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ವರ್ತಿಕಾ ಕಟಿಯಾರ್ ಸಹ ಬದಲಾಗಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಶಿವಪ್ರಕಾಶ್ ದೇವರಾಜು ವರ್ಗಾವಣೆ ಮಾಡಲು ಪ್ರಯತ್ನ ನಡೆಸಿ, ಈ ಹಿಂದೆ ಜಿಲ್ಲೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಕೆ.ಜಿ. ದೇವರಾಜ್‌ರನ್ನು ಅವರ ಜಾಗಕ್ಕೆ ತರಲು…

Read More