ನ್ಯಾಸರ್ಗಿಯಲ್ಲಿ ಹೆಬ್ಬಾರ್ ರೇಶನ್ ಕಿಟ್ ವಿತರಣೆ

ಮುಂಡಗೋಡ : ನಿಮ್ಮ ಋಣ ನನ್ನ ಮೇಲಿದೆ. ಈಗ ನೀವು ಸಂಕಷ್ಟದಲ್ಲಿದ್ದಾಗ ಭಾಗಿಯಾಗುವುದು ನನ್ನ ಕರ್ತವ್ಯ. ಅದಕ್ಕಾಗಿ 63ಸಾವಿರ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್‍ದಾರರಿಗೆ ದಿನಸಿ ಕಿಟ್‍ಗಳನ್ನು ಸ್ವಂತ ಖರ್ಚಿನಿಂದ ನೀಡುತ್ತಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಇಂದು ಹೇಳಿದರು.     ಅವರು ತಾಲೂಕಿನ ನ್ಯಾಸರ್ಗಿ ಗ್ರಾಮದಲ್ಲಿ ಹೆಬ್ಬಾರ ರೇಶನ ಕಿಟ್‍ಗಳನ್ನು ವಿತರಿಸಿ ಮಾತನಾಡುತ್ತಿದ್ದರು.  ಯಾವದೇ ಜಾತಿ ಮತ, ಪಕ್ಷ ಬೇಧ ಭಾವವಿಲ್ಲದೇ ಎಲ್ಲ ಬಿಪಿಎಲ್ ಕಾರ್ಡ್‍ದಾರರಿಗೂ ಕಿಟ್‍ಗಳನ್ನು ನೀಡುತ್ತಿದ್ದೇವೆ ಎಂದು…

Read More

16ರಂದು ಕಾರವಾರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ

ಕಾರವಾರ : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜುಲೈ 16ರಂದು ಕಾರವಾರಕ್ಕೆ ಆಗಮಿಸುತ್ತಿದ್ದಾರೆ. ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಬಗ್ಗೆ ಶಾಸಕಿ ರೂಪಾಲಿ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಳೆದ ಮಾರ್ಚ್ ತಿಂಗಳಿನಲ್ಲಿಯೇ ಶಾಸಕಿ ರೂಪಾಲಿ ನಾಯ್ಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಲಿಖಿತ ಮನವಿ ಮಾಡಿ, ಕ್ಷೇತ್ರಕ್ಕೆ ಆಗಮಿಸಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸುವಂತೆ ಕೋರಿದ್ದರು. ಆ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಿಎಸ್‌ವೈ ಕಾರವಾರಕ್ಕೆ ಆಗಮಿಸಿ  ಉದ್ಘಾಟನೆ ನೆರವೇರಿಸಲು ಸಮ್ಮತಿಸಿದ್ದಾರೆ….

Read More

ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಿಸಿದ ಸಚಿವ ಹೆಬ್ಬಾರ್

ಮುಂಡಗೋಡ : ಸರಕಾರಿ ಪ್ರಥಮ ದರ್ಜೆ ಕಾಲೇಜಿನ 287 ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ನೀಡುವ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಇಂದು ಚಾಲನೆ ನೀಡಿದರು.   ಸಚಿವ ಶಿವರಾಮ ಹೆಬ್ಬಾರ ಮಾತನಾಡಿ, ವಿದ್ಯಾರ್ಥಿಗಳ ಬೌದ್ದಿಕ ಮಟ್ಟ ಸುಧಾರಣೆಗೆ ಹಾಗೂ ತಂತ್ರಜ್ಞಾನದ ಯುಗದಲ್ಲಿ ಪೈಪೋಟಿ ನಡೆಸಲು ನೆರವಾಗಲು ಉಚಿತ ಟ್ಯಾಬ್ಲೆಟ್ ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.    ತಂತ್ರಜ್ಞಾನ ಮತ್ತು ಇಂಗ್ಲಿಷ ಕಲಿತರೆ ವಿಶ್ವ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದ್ದು, ಅಲ್ಲಿಯೂ ಸಹ…

Read More

ಮನೆ ಮದ್ದು

ಕಣ್ಣುರಿ, ಕಣ್ಣುನೋವು, ಕಣ್ಣುಬಾವು ಇದ್ದಾಗ ಕೊತ್ತಂಬರಿ ಬೀಜದ ಕಷಾಯ ಮಾಡಿ ಅದರಲ್ಲಿ ದಿನಕ್ಕೆ ಮೂರು ಬಾರಿ ಕಣ್ಣು ತೊಳೆದರೆ ಕಡಿಮೆಯಾಗುತ್ತದೆ.

Read More

ಕೊಲೆಯಾದವನ ಪತ್ನಿಯೂ ಸೇರಿದಂತೆ ಮೂವರು ಸಂಬಂಧಿಕರ ಬಂಧನ

ಯಲ್ಲಾಪುರ: ತನ್ನ ಗಂಡನನ್ನು ಕೊಲೆ ಮಾಡಿ ನಂತರ ಕಾಣೆಯಾಗಿದ್ದಾನೆ ಎಂದು ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ ಕೊಲೆಯಾದವನ ಪತ್ನಿಯೂ ಸೇರಿದಂತೆ ಮೂವರು ಸಂಬಂಧಿಕರನ್ನು  ಪೋಲಿಸರು ಬಂಧಿಸಿದ್ದಾರೆ.  ತಾಲೂಕಿನ  ಬಳಗಾರದ ಗ್ರಾಮದ ಚಿಕ್ಕಮಾವಳ್ಳಿ ಯ ನಿವಾಸಿ ಕೂಲಿ ಕೆಲಸ ಮಾಡುತ್ತಿದ್ದ  ರಾಜೇಶ ನಾರಾಯಣ ನಾಯ್ಕ(೨೯) ಕೊಲೆಯಾದನಾಗಿದ್ದಾನೆ. ಅವನ ಪತ್ನಿ  ಶ್ವೇತಾ ರಾಜೇಶ  ನಾಯ್ಕ (೨೯ )  ದೀಪಕ ಬುದ್ದಾ ಮರಾಠಿ ( ೫೩ )( ಮೃತನ ಮಾವ ) , ಗಂಗಾಧರ  ದೀಪಕ ಮರಾಠಿ (೨೬ ವರ್ಷ) (…

Read More

ಕೋವಿಡ್ ಲಸಿಕೆ ಪಡೆದ 31,944 ಜನರು

ಮುಂಡಗೋಡ : ಈವರೆಗೆ ಮುಂಡಗೋಡ ತಾಲೂಕಿನಲ್ಲಿ 31,944 ಜನರು ಕೋವಿಡ ಲಸಿಕೆ ಪಡೆದಿದ್ದಾರೆ.     1ನೇ ಡೋಸ ಲಸಿಕೆಯನ್ನು 25,747 ಜನರು ಮತ್ತು 2ನೇ ಡೋಸ್ ಲಸಿಕೆಯನ್ನು 6,197 ಜನರು ಪಡೆದಿದ್ದಾರೆ ಎಂದು ತಹಶೀಲದಾರ ಶ್ರೀಧರಮುಂದಲಮನಿ ತಿಳಿಸಿದ್ದಾರೆ.

Read More

ವನ್ನಳ್ಳಿ ಬಂದರನಲ್ಲಿ ದೋಣಿ ನಿಲ್ಲಿಸಲು ಮೀನುಗಾರರಿಗೆ ತೊಂದರೆ

ಕುಮಟಾ : ಕುಮಟಾ ಪಟ್ಟಣದ ವನ್ನಳ್ಳಿಯ ಬಂದರ್‌ನಲ್ಲಿ ನಿರ್ಮಿಸಲಾದ ಅವೈಜ್ಞಾನಿಕ ತಡೆಗೋಡೆ ಕಾಮಗಾರಿ ಬಿರುಗಾಳಿ ರಭಸಕ್ಕೆ ಕುಸಿದು ಬಿದ್ದಿದ್ದರಿಂದ ಮೀನುಗಾರರಿಗೆ ದಕ್ಕೆಯಲ್ಲಿ ದೋಣಿ ನಿಲ್ಲಿಸಲು ತೊಂದರೆಯಾಗಿದೆ. ಕುಮಟಾ ಪಟ್ಟಣದ ವನ್ನಳ್ಳಿಯ ಬಂದರ್‌ನಲ್ಲಿ ಎದುರಾಗುವ ಸಮುದ್ರಕೊರೆತ ಮತ್ತು ಅಲೆಯ ಆರ್ಭಟದಿಂದಾಗುವ ನಷ್ಟವನ್ನು ತಡೆಯಲು ಈ ಭಾಗದಲ್ಲಿ ಸಮುದ್ರಕ್ಕೆ ಅಡ್ಡಲಾಗಿ ತಡೆಗೋಡೆ ನಿರ್ಮಿಸಲಾಗಿದೆ. ಆದರೆ ಈ ತಡೆಗೋಡೆ ಕಾಮಗಾರಿ ವೈಜ್ಞಾನಿಕವಾಗಿದ್ದರಿಂದ ಕೆಲವೇ ವರ್ಷಗಳಲ್ಲಿ ತಡೆಗೋಡೆ ಕುಸಿದು,ಕಲ್ಲುಗಳೆಲ್ಲ ಸಮುದ್ರ ಪಾಲಾಗಿದೆ. ಇದರಿಂದ ದೋಣಿ ನಿಲ್ಲುವ ದಕ್ಕೆಯಲ್ಲೂ ಕಲ್ಲುಗಳು ಬಂದು ಬಿದ್ದಿದ್ದರಿಂದ ದೋಣಿ ನಿಲ್ಲಿಸಲಾಗದ…

Read More

ಮುಂಡಗೋಡನಲ್ಲಿ ರವಿವಾರ ಹೆಬ್ಬಾರ್ ರೇಶನ್ ಕಿಟ್ ವಿತರಣೆ

ಮುಂಡಗೋಡ : ದಿ.11ರಂದು ರವಿವಾರ ಮುಂಡಗೋಡ ನಗರದಲ್ಲಿ ಹೆಬ್ಬಾರ್ ರೇಶನ್ ಕಿಟ್ ನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರ್ ವಿತರಿಸಲಿದ್ದಾರೆ.    ದಿ.11ರಂದು ಸಂಜೆ 4ಗಂಟೆಗೆ ಹಳೂರ ಓಣಿಯಲ್ಲಿ, 4-45ಕ್ಕೆ ಟೌನಹಾಲನಲ್ಲಿ, 5-15ಕ್ಕೆ ಗಾಂಧಿನಗರದಲ್ಲಿ ಸಚಿವ ಶಿವರಾಮ ಹೆಬ್ಬಾರ ಅವರು ಹೆಬ್ಬಾರ್ ರೇಶನ್ ಕಿಟ್ ವಿತರಿಸಲಿದ್ದಾರೆ. ನಂತರ ಮೀನುಗಾರಿಕೆ ಇಲಾಖೆಯಲ್ಲಿ ಪರಿಕರಗಳನ್ನು ಸಚಿವರು ವಿತರಿಸಲಿದ್ದಾರೆ.

Read More

ಅನಧಿಕೃತ ಚಿರೇಕಲ್ಲು ಕ್ವಾರಿಗಳ ಮೇಲೆ ಅಧಿಕಾರಿಗಳ ದಾಳಿ

ಭಟ್ಕಳ : ತಾಲೂಕಿನ ಮಾರುಕೇರಿ ಪಂಚಾಯತಿ ವ್ಯಾಪ್ತಿಯ ಕೋಟಖಂಡದಲ್ಲಿ ಅನಧಿಕೃತವಾಗಿ ಕೆಂಪುಕಲ್ಲಿನ ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆಕಾರವಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ತಂಡ ಮತ್ತು ಭಟ್ಕಳ ಕಂದಾಯ ಇಲಾಖೆಯ ತಂಡ ದಾಳಿ ನಡೆಸಿ ಯಂತ್ರೋಪಕರಣಗಳನ್ನು ವಶಕ್ಕೆ ಪಡೆದಿದ್ದಾರೆ. ಮಾರುಕೇರಿ ಪಂಚಾಯತಿ ವ್ಯಾಪ್ತಿಯಲ್ಲಿ ಅನಧಿಕೃತ ಕೆಂಪುಕಲ್ಲಿನ ಗಣಿಗಾರಿಕೆ ನಡೆಯುತ್ತಿರುವ ಕುರಿತು ಗಣಿ ಇಲಾಖೆಗೆ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಕಾರವಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ತಂಡ ಮತ್ತು ಭಟ್ಕಳ ಕಂದಾಯ ಇಲಾಖೆಯ ತಂಡ ದಾಳಿ ನಡೆಸಿದೆ….

Read More